ಅ 27 : ಚೆನ್ನಾವರ ಸಿರಾಜುಲ್ ಉಲೂಮ್ ಮದ್ರಸ ನೂತನ ಕಟ್ಟಡ ಉದ್ಘಾಟನೆ

0

 

ಕಡಬ ತಾಲೂಕು ಪಾಳ್ತಾಡಿ ಗ್ರಾಮದ ಚೆನ್ನಾವರ ಮುಹಿಯದ್ದೀನ್ ಜುಮಾ ಮಸ್ಜಿದ್ ಖಿದ್ಮತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಮದರಸ ಕಟ್ಟಡ ಅಕ್ಟೋಬರ್ 27 ರಂದು ಉದ್ಘಾಟನೆಗೊಳ್ಳಲಿದೆ.


ನೂತನ ಕಟ್ಟಡವನ್ನು ಅಸ್ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟನೆಗೊಳಿಸಲಿದ್ದಾರೆ.
ದುವಾ ನೇತೃತ್ವವನ್ನು ಅಸಯ್ಯದ್ ಸಮೀರ್ ಅಲಿ ಸಿಹಾಬ್ ತಂಙಳ್ ಪಾಣಕ್ಕಾಡ್ ನಿರ್ವಹಿಸಲಿದ್ದು, ಮುಖ್ಯ ಪ್ರಭಾಷಣಕಾರರಾಗಿ ಖ್ಯಾತವಾದ್ಮಿಗಳಾದ ಆಶಿಕ್ ದಾರಿಮಿ ಆಲಪ್ಪುಯ, ಪೇರೋಡ್ ಮಹಮ್ಮದ್ ಅಜ್ಹರಿ ಭಾಗವಹಿಸಲಿದ್ದಾರೆ.
ನೂತನ ಕಾಮಗಾರಿಗಳ ಸಿಲನ್ಯಾಸವನ್ನು ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು ನಿರ್ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನಾರ್ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಬ್ದುಲ್ ಲತೀಫ್ ಬಾಅಲವಿ ತಂಙಳ್ ವಹಿಸಲಿದ್ದಾರೆ.
ವೇದಿಕೆಯಲ್ಲಿ, ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್,ಅಸ್ಸಯ್ಯದ್ ಹಾಮಿದ್ ತಂಙಳ್ ಮುಹಿಮ್ಮತ್,ಅಸ್ಸಯ್ಯದ್ ಹಸನುಲ್ ಅಹ್ದಲ್ ತಂಙಳ್ ತಂಬಿನಮಕ್ಕಿ,ಅಸ್ಸಯ್ಯದ್ ಕುಂಞಿಕೋಯಾ ತಂಙಳ್ ನಾವೂರು, ಹಾಗೂ ಇನ್ನಿತರ ಉಲಮಾ,ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here