ಕುದ್ಮಾರು ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಮನೆಗೆ ಯೋಜನೆ ಉದ್ಘಾಟನೆ

0

ಪುತ್ತೂರು: ಕುದ್ಮಾರು ಗ್ರಾಮದಲ್ಲಿ ಕಂದಾಯ ಇಲಾಖೆಯವರು ಕಂದಾಯ ಇಲಾಖೆ ಯೋಜನೆ ಮನೆ ಮನೆ ಕಾರ್ಯಕ್ರಮ ನಡೆಸಿದರು. ಬರೆಪ್ಪಾಡಿ ಡ್ವಾಕ್ರ ಕಟ್ಟಡದಲ್ಲಿ ಉದ್ಘಾಟನೆ ಮಾಡಿ ನಂತರ ಗ್ರಾಮದ ಮನೆ ಮನೆಗೆ ಹೋಗಿ ಸುಮಾರು 40 ಕುಟುಂಬದವರಿಗೆ 100 ಜಾತಿ ಆದಾಯ , 40 ಪಹಣಿ ವಿತರಿಸಲಾಯಿತು.

 


ಉದ್ಘಾಟನೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ನೆರವೇರಿಸಿದರು. ಗ್ರಾ.ಪಂ.‌ ಸದಸ್ಯ ಪ್ರವೀಣ್ ಕೆರೆನಾರು , ಗೀತಾ ಕುವೆತೋಡಿ ತಾ.ಪಂ ಮಾಜಿ ಸದಸ್ಯೆ ಲಲಿತಾ ಈಶ್ವರ್ ಸಾಮಾಜಿಕ ಮುಂದಾಳು ಪ್ರವೀಣ್ ಕುಮಾರ್ ಕೆಡೆಂಜಿಗುತ್ತು. ಉಪಸ್ಥಿತರಿದ್ದರು. ಕಂದಾಯ ಇಲಾಖೆಯಲ್ಲಿನ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಗ್ರಾಮಸ್ಥರಿಗೆ ಕಡಬ ತಾಲೂಕು ಕಚೇರಿಯ ಶರೀಫ್ ನೀಡಿದರು. ಕುದ್ಮಾರು ಗ್ರಾಮ ಸಹಾಯಕ ಯೋಗೀಶ್ ಬರೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಕೆಡೆಂಜಿ,ಸೂರಪ್ಪ ಗೌಡ ಪಟ್ಟೆತ್ತಾನ , ಉಮೇಶ್ ಕಾರ್ಲಾಡಿ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here