ಕುಂಬರ್ಚೋಡು: ಪ್ರವಾದಿ ಸಂದೇಶ ಮತ್ತು ಮಕ್ಕಳ ಮೀಲಾದ್ ಕಾರ್ಯಕ್ರಮ

0

 

ಜಾಲ್ಸೂರು ಗ್ರಾಮದ ಬೊಳುಬೈಲು, ಕುಂಬರ್ಚೋಡು ಮುಹಿಯದ್ದೀನ್ ಜುಮಾ ಮಸೀದಿ ಇದರ ಆಶ್ರಯದಲ್ಲಿ ಪ್ರವಾದಿ ಸಂದೇಶ ಹಾಗೂ ಮಕ್ಕಳ ಮೀಲಾದ್ ಕಾರ್ಯಕ್ರಮ ಅಕ್ಟೋಬರ್ 23ರಂದು ಕುಂಬರ್ಚೋಡು ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ವಹಿಸಿದ್ದರು. ಅಪರಾಹ್ನ 12 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆದು ಈದ್ ಮಿಲಾದ್ ಅಂಗವಾಗಿ ಮದರಸ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರವಾದಿ ರವರ ಸಂದೇಶದ ಕುರಿತು ಖ್ಯಾತ ವಾಗ್ಮಿಹನೀಫ್ ನಿಜಾಮಿ ಕಾಸರಗೋಡು ಮುಖ್ಯ ಪ್ರಭಾಷಣ ಮಾಡಿದರು.
ಸ್ಥಳೀಯ ಮಸೀದಿ ಖತೀಬರಾದ ಅಶ್ರಫ್ ಮುಸ್ಲಿಯರ್ ದುವಾ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್, ಕೇಂದ್ರ ಜುಮಾ ಮಸೀದಿ ಗಾಂಧಿನಗರ ಇದರ ಅಧ್ಯಕ್ಷ ಹಾಜಿ ಮುಸ್ತಫ ಜನತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಮಸೀದಿ ಆಡಳಿತ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಪೈಚಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಟಿ ಎ, ಮುಖಂಡರುಗಳಾದ ಹಾರಿಸ್ ಚೆರ್ಕಳ, ಶರೀಫ್ ಇಂಜಿನಿಯರ್, ಅಹಮದ್ ಹಾಜಿ ಸವಣೂರು, ಸಮಿತಿ ಉಪಾಧ್ಯಕ್ಷ ಅಬ್ದುಲ್ ಕರೀಂ ಬಿ ಎಂ, ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ, ಅಬ್ದುಲ್ ಖಾದರ್ ಹಾಜಿ, ಯಾಕೂಬ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಿರಣಿ ವಿತರಣೆ ನಡೆಯಿತು. ಸ್ಥಳೀಯ ನೂರಾರು ಮಂದಿ ಮುಸಲ್ಮಾನ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಶ್ರಫ್ ಮುಸ್ಲಿಯರ್ ಸ್ವಾಗತಿಸಿ ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಸಮಿತಿಯ ಎಲ್ಲಾ ಸದಸ್ಯರು, ಸ್ಥಳೀಯ ಯುವಕರು ಸಹಕರಿಸಿದರು.

LEAVE A REPLY

Please enter your comment!
Please enter your name here