ಸುಳ್ಯದಲ್ಲಿ ಮರಾಟಿ ಯುವ ವೇದಿಕೆ ಆಶ್ರಯದಲ್ಲಿ ಅಂತರ್ ಜಿಲ್ಲಾ ಹಗ್ಗ ಜಗ್ಗಾಟ

0

 

ಹಿಂದೂ ಜಾಗರಣ ವೇದಿಕೆ ಶಿವಾಜಿನಗರ ಮತ್ತು ನವಯುಗ ಬಳವಂತಡ್ಕ ವಿನ್ನರ್ಸ್

ಮರಾಟಿ ಸಮಾಜ ಸೇವಾ ಸಂಘ ಸುಳ್ಯ ಮತ್ತು ಮರಾಟಿ ಮಹಿಳಾ ವೇದಿಕೆ ಸುಳ್ಯ ಇವರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆ ಆಶ್ರಯದಲ್ಲಿ ಅ.23ರಂದು ಸುಳ್ಯದ ಮರಾಟಿ ಸಮುದಾಯ ಭವನದಲ್ಲಿ ಮರಾಟಿ ಸಮಾಜ ಬಾಂಧವರಿಗೆ ನಡೆದ ಅಂತರ್ ಜಿಲ್ಲಾ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಮಹಿಳೆಯರ ವಿಭಾಗದಲ್ಲಿ
ನವಯುಗ ಬಳವಂತಡ್ಕ ಪ್ರಥಮ, ಷಣ್ಮುಗ ಬಲಗ ಆರ್ಲಪದವು ದ್ವಿತೀಯ,
ಮಹಿಳಾ ವೇದಿಕೆ ತಾಳತ್ತಮನೆ ತೃತೀಯ,
ವನದುರ್ಗ ದೊಡ್ಡೇರಿ ಚತುರ್ಥ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆದುಕೊಂಡರು . ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹಿಂದೂ ಜಾಗರಣ ವೇದಿಕೆ ಶಿವಾಜಿನಗರ,
ದ್ವಿತೀಯ ಬಹುಮಾನವನ್ನು ಮಹಮ್ಮಾಯಿ ತಡಂಚಿಪಾರೆ,
ತೃತೀಯ ಶ್ರೀ ಶಾಸ್ತಾವು ಕಲ್ಲಡ್ಕ,, ಚತುರ್ಥ ತುಳುನಾಡು ಫ್ರೆಂಡ್ಸ್ ವಾಣಿನಗರ ತಂಡಗಳು‌ ಪಡೆದು ಕೊಂಡು ನಗದು ಮತ್ತು ಟ್ರೋಫಿ ಯನ್ನು ತನ್ನದಾಗಿಸಿಕೊಂಡರು.

ಪುರುಷರ ವಿಭಾಗದಲ್ಲಿ 32 ಮತ್ತು ಮಹಿಳೆಯರ ವಿಭಾಗದಲ್ಲಿ 9 ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.
ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭ ಯುವ ವೇದಿಕೆಯ ಅಧ್ಯಕ್ಷ ಮೋಹನ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಯೋಧ ನಾರಾಯಣ ನಾಯ್ಕ ಅರಂಬೂರು ಬಹುಮಾನ ವಿತರಣೆ ಮಾಡಿದರು. ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ದಾಮೋದರ ಮಂಚಿ , ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಿರಿಜಾಎಂ.ವಿ.,ಮರಾಟಿ.ಸ.ಸೇ.ಸಂ.ದ ಮಾಜಿ ಅಧ್ಯಕ್ಷ ನಾರಾಯಣ ನಾಯ್ಕ ಬೀರಮಂಗಲ,ನ.ಪಂ.ಸದಸ್ಯೆ ಶ್ರೀಮತಿ ಶೀಲಾ ಕುರುಂಜಿ, ಮರಾಟಿ ಸ.ಸೇ.ಸಂ.ದ ಅಧ್ಯಕ್ಷ ಜನಾರ್ಧನ ಬಿ.ಕುರುಂಜಿಭಾಗ್ , ಹಗ್ಗಜಗ್ಗಾಟದ ನಿರೂಪಕ ಸುರೇಶ್ ಪಡಿಪಂಡ ಉಪಸ್ಥಿತರಿದ್ದು ಮಾತನಾಡಿದರು.
ಯುವ ವೇದಿಕೆಯ ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು ಹಾಗೂ ಮರಾಟಿ ಸ. ಸೇ.ಸಂ.ದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಸಹಕರಿಸಿದರು.ಜಂಟಿ ಸಂಘಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಮರಾಟಿ ಸ.ಸೇ.ಸಂ.ದ ಸಂಘಟನಾ ಕಾರ್ಯದರ್ಶಿ ಈಶ್ವರ್ ವಾರಣಾಶಿ ಸ್ವಾಗತಿಸಿ, ರಘುನಾಥ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ನಡೆದ ಪಂದ್ಯಾಟದ ಅಂಕಣ ಉದ್ಘಾಟನೆಯನ್ನು ಮರಾಟಿ ಸ.ಸೇ.ಸಂ.ದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ ಹೊನ್ನೇಡಿ ನೆರವೇರಿಸಿದರು.ಗೌರವ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷರಾದ ಎ.ಕೆ.ನಾಯ್ಕ್ ಚೊಕ್ಕಾಡಿ ಶುಭಹಾರೈಸಿದರು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here