ಪೆರಿಯಡ್ಕ: ರಾಮಕೃಷ್ಣ ಕಾಂಪ್ಲೆಕ್ಸ್ ಉದ್ಘಾಟನೆ

0

  • ಜಗದೀಶ್ ಆಚಾರ್ಯ ಬಳಗದಿಂದ ‘ಸಂಗೀತ ಗಾನ ಸಂಭ್ರಮ’

ಉಪ್ಪಿನಂಗಡಿ: ಪೆರಿಯಡ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮಕೃಷ್ಣ ಕಾಂಪ್ಲೆಕ್ಸ್‌ನ ಉದ್ಘಾಟನಾ ಸಮಾರಂಭ ಹಾಗೂ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.


ರಾಮಕೃಷ್ಣ ಕಾಂಪ್ಲೆಕ್ಸ್ ಉದ್ಘಾಟಿಸಿ ಶುಭ ಹಾರೈಸಿದ ಖ್ಯಾತ ವೈದ್ಯ ಡಾ. ಪ್ರಸಾದ್ ಭಂಡಾರಿ, ರಾಮಕೃಷ್ಣರು ಕೂಡಾ ಪರೋಪಕಾರಿಯಾಗಿದ್ದುಕೊಂಡು ಕಷ್ಟ ಅಂತ ಹೇಳಿಕೊಂಡು ತನ್ನಲ್ಲಿಗೆ ಬಂದವರಿಗೆ ತನ್ನಿಂದಾದಷ್ಟು ಸಹಾಯ ಹಸ್ತ ಚಾಚುತ್ತಿದ್ದರು. ಅದೇ ರೀತಿ ಅವರ ಮಕ್ಕಳು ಕೂಡಾ ಇಂದು ಅದೇ ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರೆಯುತ್ತಿದ್ದಾರೆ. ಈ ಕಾಂಪ್ಲೆಕ್ಸ್ ಕಟ್ಟಿಸಿರುವ ಪ್ರತಾಪ್ ಕೂಡಾ ಓರ್ವ ಯಶಸ್ವಿ ಉದ್ಯಮಿಯಾಗಿದ್ದು, ಇದರೊಂದಿಗೆ ಎಲೆಮರೆಕಾಯಿಯಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಕೇವಲ ತಮ್ಮ ಬಗ್ಗೆ ಮಾತ್ರ ಚಿಂತಿಸದೇ ಸಮಾಜಕ್ಕಾಗಿ ಮಿಡಿಯುವ ಮನಸ್ಸುಳ್ಳ ಇವರಿಗೆ ದೇವರು ಇನ್ನಷ್ಟು ಸಂಪತ್ತು, ಆರೋಗ್ಯವನ್ನು ಕರುಣಿಸಲಿ ಎಂದರು.

ಡಾ. ಪ್ರಸಾದ್ ಭಂಡಾರಿಯವರ 77ನೇ ಹುಟ್ಟು ಹಬ್ಬವನ್ನು ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪೆರಿಯಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ತಾ.ಪಂ. ಮಾಜಿ ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಶಂಕರನಾರಾಯಣ ಭಟ್ ಬೊಳ್ಳಾವು, ರಾಘವ, ಮಮತಾ, ಗಿರೀಶ್, ರೇಖಾ, ಪ್ರಮೋದ್, ಕುಸುಮ, ಪ್ರಸನ್ನ ಪೆರಿಯಡ್ಕ, ಭವ್ಯ, ಪ್ರಶಾಂತ್, ವಿಜಯಲಕ್ಷ್ಮೀ, ಪ್ರದೀಪ್, ಸುನೀತಾ, ಪ್ರಥ್ವಿರಾಜ್, ಭವಿತಾ, ಅಶ್ವಿನ್ ಕುತ್ತಾರ್, ಗಣೇಶ್ ಆಚಾರ್ಯ, ದೀಕ್ಷಿತಾ, ಉಮೇಶ್ ಕೋಡಿಜಾಲು, ಆಶಾಲತಾ, ಲೋಕೇಶ್ ಎನ್., ಮಮತಾ, ಉಮೇಶ್ ಬಂಗೇರ, ಯಶೋಧಾ, ವಸಂತ ಎಸ್.ಕೆ., ಲತಾ, ಶಿವರಾಜ್ ಕುಂಟಿನಿ, ಪ್ರವೀಣ್ ಕುಮಾರ್, ಕೃಷ್ಣಪ್ರಸಾದ್ ಬೊಳ್ಳಾವು, ಬಾಲಕೃಷ್ಣ ಶರಣ್ಯ, ಸದಾನಂದ ಶೆಟ್ಟಿ ಕಿಂಡೋವು, ಬಾಬು ಗೌಡ ನೆಡ್ಚಿಲ್, ಚಂದ್ರಶೇಖರ ಮಡಿವಾಳ, ರಾಧಾಕೃಷ್ಣ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.

ಕಟ್ಟಡದ ಮಾಲಕ ಪ್ರತಾಪ್ ಶ್ರೀಲತಾ ದಂಪತಿ ಸ್ವಾಗತಿಸಿದರು. ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ವಂದಿಸಿದರು. ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು.

ಜನಮನ ಸೂರೆಗೊಂಡ ‘ಸಂಗೀತ ಗಾನ ಸಂಭ್ರಮ’
ಕಾಂಪ್ಲೆಕ್ಸ್ ಉದ್ಘಾಟನೆಯಂಗವಾಗಿ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಗ್ರಾಮಾಂತರ ಪ್ರದೇಶವಾದ ಪೆರಿಯಡ್ಕದ ಇತಿಹಾಸದಲ್ಲಿಯೇ ಇಂತಹ ಕಾರ್ಯಕ್ರಮ ಮೊದಲ ಬಾರಿಗೆ ನಡೆದು ಜನಮನ ಸೂರೆಗೊಳಿಸಿತು. ಊರಿನ ಮನೆಮಂದಿಯೆಲ್ಲಾ ನಮ್ಮದೇ ಕಾರ್ಯಕ್ರಮವೆಂಬಂತೆ ಇದರಲ್ಲಿ ಭಾಗವಹಿಸಿದ್ದು, ಕಿಕ್ಕಿರಿದ ಜನಸಂದಣಿಯೇ ಇದಕ್ಕೆ ಸಾಕ್ಷಿಯಾಗಿತ್ತು.

LEAVE A REPLY

Please enter your comment!
Please enter your name here