ಪುತ್ತೂರಿನಿಂದ ಸುಳ್ಯದವರೆಗೆ ಕಸದ ಸ್ವಾಗತ-ರಸ್ತೆಯ ಇಕ್ಕೆಲಗಳಲ್ಲೂ ಗಲೀಜು-ವಾಸನೆಯೋ ವಾಸನೆ

0

  • -ದಾಮೋದರ್ ದೊಂಡೋಲೆ
     ಮತ್ತು ಶಿವಕುಮಾರ್ ಈಶ್ವರಮಂಗಲ

 

ಪುತ್ತೂರು-ಕೋಳಿ ತ್ಯಾಜ್ಯ, ಕೊಳೆತ ಮಾಂಸ, ಮಕ್ಕಳ ಗಲೀಜಾದ ಡೈಪರ್,ಮದ್ಯದ ಬಾಟಲಿಗಳ ರಾಶಿ,ಹಳೆಯ ಬಟ್ಟೆ, ತಿಂದುಳಿದ ಆಹಾರ ಪದಾರ್ಥಗಳು,ಕೊಳೆತ ತರಕಾರಿ, ಪ್ಲಾಸ್ಟಿಕ್ ಬಾಟಲಿಗಳ ರಾಶಿಯ ದರ್ಶನ. ಇದು ಯಾವುದೋ ಘನತ್ಯಾಜ್ಯ ಘಟಕದಲ್ಲಿನ ಸ್ಟೋರಿಯಲ್ಲ, ಬದಲಾಗಿ ಇದು ಪುತ್ತೂರು-ಸುಳ್ಯ ಹೆದ್ದಾರಿಯಲ್ಲಿ ನಮಗೆ ಭವ್ಯವಾಗಿ ಸ್ವಾಗತ ನೀಡುವ ಕಸದ ರಾಶಿ. ರಸ್ತೆಯ ಪಕ್ಕದಲ್ಲಿ ಕಸ ಬಿಸಾಕುವುದೇ  ಫ್ಯಾಷನ್ ಆಯ್ತಾ? ಇಲ್ಲಿ ಕಸ ಬಿಸಾಡುವವರು ನಿಜವಾದ ದೇಶದ್ರೋಹಿ ಅಲ್ಲವೇ?


ಸುದ್ದಿ ನ್ಯೂಸ್ ತಂಡ ಈ ಕಸದ ತೀವ್ರತೆ ಕಂಡು ರಿಯಾಲಿಟಿ ಚೆಕ್ ಮಾಡುವುದಕ್ಕಾಗಿ ಪುತ್ತೂರಿನಿಂದ ಸುಳ್ಯಕ್ಕೆ ಹೊರಟಿತು. ಈ ವೇಳೆ ನಮಗೆ ದರ್ಬೆಯಿಂದ ಸ್ವಲ್ಪ ಮುಂದೆ ತೆರಳಿದಾಗಲೇ ಕಸದ ಸ್ವಾಗತ ಆರಂಭವಾಯ್ತು. ಎಲ್ಲಿಯವರೆಗೆ ಅಂದ್ರೆ ಕಟ್ಟಡದ ವೇಸ್ಟ್ ಗಳನ್ನು ಕೂಡ ರಸ್ತೆ ಬದಿಯಲ್ಲೇ ಎಸೆದಿದ್ದಾರೆ. ಇದರ ಜೊತೆಗೆ ದಿನನಿತ್ಯ ಕಸದ ರಾಶಿ ಹೆಚ್ಚಾಗುತ್ತಲೇ ಇದೆ ಅನ್ನುವ ಅಭಿಪ್ರಾಯ ನಿಜಕ್ಕೂ ಆಘಾತಕಾರಿ. ಮನೆಯಲ್ಲಿ ತಿಂದು ಉಳಿದ ವೇಸ್ಟ್, ಮಕ್ಕಳ ಡೈಪರ್, ಮದ್ಯದ ಬಾಟಲಿ, ಕೋಳಿ ತ್ಯಾಜ್ಯ ಮುಂತಾದ ಕಸದ ರಾಶಿಯನ್ನು ಗಂಟು ಕಟ್ಟಿಕೊಂಡೋ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡೋ ಬರುವ ದೇಶದ್ರೋಹಿಗಳು ಕಳ್ಳರಂತೆ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಲ್ಲಿ ಸ್ಥಳೀಯರ ಪಾತ್ರ ಇದ್ಯಾ, ಪ್ರವಾಸಿಗರ ಪಾತ್ರವಿದ್ಯಾ, ವ್ಯಾಪಾರಿಗಳ ಪಾತ್ರವಿದ್ಯಾ ಅನ್ನುವುದನ್ನು ತಿಳಿಯಬೇಕಿದೆ.


ಕಸದ ರಾಶಿಯ ನಡುವೆ ಗ್ರಾಮ ಪಂಚಾಯತ್ ಗಳ ಎಚ್ಚರಿಕೆಯ ಬೋರ್ಡ್ ದಂಡ,ಶಿಕ್ಷೆ ಅಂತ ಬರೆದರೂ ಕಸ ಹಾಕುವವರಿಗೆ ಡೋಂಟ್ ಕೇರ್!

ಕಸದ ರಾಶಿಯ ನಡುವೆ ಗ್ರಾಮ ಪಂಚಾಯತ್ ಗಳ ಎಚ್ಚರಿಕೆಯ ಬೋರ್ಡ್ ಹಾಕಲಾಗಿದೆ. ಅಥವಾ ಬೋರ್ಡ್ ಹಾಕಿರುವಲ್ಲೇ ಕಸವನ್ನು ಹೆಚ್ಚು ಹಾಕಿದ್ದಾರೆ. ಪುತ್ತೂರಿನಿಂದ ಸುಳ್ಯದ ತನಕ ಮುಖ್ಯ ರಸ್ತೆಯ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮ ಪಂಚಾಯತಿಗಳು ಬೋರ್ಡ್ ಅಳವಡಿಸಿವೆ. ಆದರೆ ಆ ಬೋರ್ಡ್ ಗಳಿಗೆ ಕಸ ಬಿಸಾಡುವ ದೇಶ ದ್ರೋಹಿಗಳು ಕ್ಯಾರೇ ಎಂದಿಲ್ಲ.
ಕಸದ ತೊಟ್ಟಿಗಳ ತೆರವುಗೊಳಿಸಿದ್ದೆ ಕಸ ಹೆಚ್ಚಾಗಲು ಕಾರಣವೇ: ಕೆಲ ಮಾಹಿತಿಗಳ ಪ್ರಕಾರ ಈ ಹಿಂದೆ ಹಲವು ಕಡೆ ಕಸದ ತೊಟ್ಟಿಗಳನ್ನು ಇಡಲಾಗಿತ್ತು. ಆದರೆ ಈಗ ಅದನ್ನು ತೆರವುಗೊಳಿಸಲಾಗಿದ್ದು, ಇದು ಅಲ್ಲಲ್ಲಿ ಕಸ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ.ಈ ಬಗ್ಗೆ ಸಂಬಂಧಪಟ್ಟವರು ತನಿಖೆ ನಡೆಸಬೇಕಿದೆ.

ಆರ್ಯಾಪು ಗ್ರಾ.ಪಂ.ನಿಂದ ಸ್ವಚ್ಛತೆಯ ಪ್ರಯತ್ನ ರಾತ್ರಿಯಿಡೀ ಕಾದರೂ ಸಿಗಲಿಲ್ಲ ಕಸ ಬಿಸಾಡುವ ದುರುಳರು
ಸಂಪ್ಯದಿಂದ ಮೊದಲ್ಗೊಂಡು ಕಲ್ಲರ್ಪೆ ಸುತ್ತ ಮುತ್ತ ಅತೀ ಹೆಚ್ಚು ಕಸ ಬಿಸಾಡುತ್ತಾರೆ. ಈ ಬಗ್ಗೆ ಆರ್ಯಾಪು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಽಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ, ಕಸ ಬಿಸಾಡುವವರನ್ನು ಪತ್ತೆ ಹಚ್ಚಲು ರಾತ್ರಿ ಕಾದಿದ್ದಾರೆ. ಆದರೆ ಯಾವತ್ತು ರಾತ್ರಿ ಸದಸ್ಯರು ಕಾವಲು ನಿಲ್ಲುತ್ತಿದ್ದರೋ ಆವತ್ತು ಕಸ ಬಿಸಾಡುವವರು ಅಲ್ಲಿ ಬಿಸಾಡದೇ ಮತ್ತೆಲ್ಲೋ ಬಿಸಾಡುತ್ತಾ ಎಸ್ಕೇಪ್ ಆಗುತ್ತಿದ್ದರು. ಸುದ್ದಿ ನ್ಯೂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಕ್ಲೀನಿಂಗ್ ಮಾಡಲು ಮುಂದಾದ್ರೂ ಕೂಡ ಅವೈಜ್ಞಾನಿಕವಾಗಿ ಮಾಡಿದ್ದು, ಕಸವನ್ನು ರಸ್ತೆಯ ಪಕ್ಕದಿಂದ ಹಿಂದೆ ಹಾಕಿದ್ದಾರೆ.

ಆನೆ ಗುಂಡಿಯಲ್ಲ ಗಲೀಜಿನ ಗಜ ಗುಂಡಿ ಪ್ರವಾಸಿ ತಾಣವನ್ನೂ ಹಾಳುಗೆಡವಿದ್ದಾರೆ ದುರುಳರು
ಪುತ್ತೂರು ಸುಳ್ಯ ರಸ್ತೆಯಲ್ಲಿ ಸಂಚರಿಸುವಾಗ ನಮಗೆ ಸಿಗುವ ಪ್ರಕೃತಿ ಮಾತೆಯ ತಾಣ ಆನೆಗುಂಡಿ. ಈ ಆನೆಗುಂಡಿ ಪ್ರವಾಸಿ ತಾಣ ಸಂರಕ್ಷಿತ ಅರಣ್ಯ ಪ್ರದೇಶ. ಸುಂದರವಾಗಿದ್ದ ಪರಿಸರ ಈಗ ಈ ಕಸ ಬಿಸಾಡುವ ದುರುಳರಿಂದಾಗಿ ಗಬ್ಬು ನಾರುತ್ತಿದೆ. ಆನೆ ಗುಂಡಿಯಲ್ಲಿ ಕಸ ತುಂಬಿಹೋಗಿದೆ. ನಿರಂತರವಾಗಿ ಕಸವನ್ನು ಇಲ್ಲಿ ಬಿಸಾಡಲಾಗುತ್ತಿದ್ದು ಗಬ್ಬುವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ. ಇದು ಪುತ್ತೂರು ಸುಳ್ಯದ ತನಕವೂ ಕೂಡ ವ್ಯಾಪಿಸಿದೆ. ಪ್ಲಾಸ್ಟಿಕ್ ಗಳಿಗಂತೂ ಲೆಕ್ಕವೇ ಇಲ್ಲ. ಇದರ ನಡುವೆ ಗ್ರಾಮ ಪಂಚಾಯತ್, ನಗರ ಸಭೆ, ಜನಪ್ರತಿನಿಧಿಗಳು ಕೋಳಿ -ರಂಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲೇಬೇಕಿದೆ. ಅತೀ ಹೆಚ್ಚು ಕೋಳಿ ತ್ಯಾಜ್ಯ ಬೀಳುವುದರ ಹಿಂದಿರುವ ಕಾರಣವನ್ನು ತಿಳಿಯಬೇಕಿದೆ. ಜೊತೆಗೆ ಇಲ್ಲಿ ಕಸ ಬಿಸಾಡುವವರಿಗೆ ಶಿಕ್ಷೆಯಾಗಲೇಬೇಕಿದೆ. ದಂಡಂ ದಶಗುಣಂ ಅನ್ನುವುದೇ ಕಸ ಬಿಸಾಡುವ ದೇಶದ್ರೋಹಿಗಳಿಗೆ ಮದ್ದು ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಮಗೆ ಸುದ್ದಿಯ ವರದಿ ನೋಡಿ ಮುಜುಗರವಾಗಿದೆ. ನಾವು ರಸ್ತೆ ಬದಿಯಲ್ಲಿ ಕಸ ಬಿಸಾಡುವವರನ್ನು ತಪ್ಪಿಸುವುದು ಕಷ್ಟಸಾಧ್ಯವಾಗಿದೆ. ಆರ್ಯಾಪು ಗ್ರಾಮ ಪಂಚಾಯತ್ ಕಸ ಬಿಸಾಡುವುದನ್ನು ತಪ್ಪಿಸುವುದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇದೆ.ನಮ್ಮ ಸದಸ್ಯರು ಇಲ್ಲಿ ರಾತ್ರಿ ಕಾವಲು ಕಾದು ಕುಳಿತಾಗ ಯಾರೂ ಕಸ ಬಿಸಾಡಲಿಲ್ಲ. ಇಲ್ಲಿ ನಾವು ಸಿಸಿಟಿವಿ ಅಳವಡಿಕೆಗೆ ಕೆಲ ತಾಂತ್ರಿಕ ತೊಂದರೆಗಳಿವೆ. ಅವುಗಳ ಸರಿಯಾದರೇ ಆದಷ್ಟು ಬೇಗ ಸಿಸಿಟಿವಿ ಅಳವಡಿಸುತ್ತೇವೆ. ಪುತ್ತೂರು ಸುಳ್ಯ ಮುಖ್ಯ ರಸ್ತೆ ಹೊರತು ಪಡಿಸಿ, ಉಳಿದ ನಮ್ಮ ಗ್ರಾ ಪಂಚಾಯತ್ ವ್ಯಾಪ್ತಿಯ ಕಸ ಸಂಗ್ರಹ ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮ ಹೊಸ ಘನ ತ್ಯಾಜ್ಯ ಘಟಕ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.ಇದಾದ ನಂತರ ಮತ್ತಷ್ಟು ವ್ಯವಸ್ಥಿತವಾಗಿ ಕಸ ವಿಲೇವಾರಿ ಆಗಲಿದೆ. ಆದರೆ ಮುಖ್ಯ ರಸ್ತೆಯಲ್ಲಿ ಕಸ ಬಿಸಾಡುವವರನ್ನು ತಡೆಯಲು ನಮಗೆ ಹೆದ್ದಾರಿ ಇಲಾಖೆ,ಪೊಲೀಸ್ ಇಲಾಖೆಯ ಸಹಕಾರವೂ ಬೇಕಾಗಿದೆ ನಾಗೇಶ್, ಆರ್ಯಾಪು ಗ್ರಾ.ಪಂ.ಪಿಡಿಓ

LEAVE A REPLY

Please enter your comment!
Please enter your name here