ಮಡಪ್ಪಾಡಿ ಸರಕಾರಿ ಬಸ್ ವೇಳಾಪಟ್ಟಿ ಬದಲಾಯಿಸುವಂತೆ ಮನವಿ

0

… ಮೇಘನಾ ಮಡಪ್ಪಾಡಿ

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಿಂದ ಸುಳ್ಯ ಪಟ್ಟಣವನ್ನು ಸಂಪರ್ಕಿಸಲು ಬಸ್ಸಿನ ಕೊರತೆ ಹೆಚ್ಚಾಗಿದೆ. ಮಡಪ್ಪಾಡಿ ಗ್ರಾಮದಿಂದ ಸುಳ್ಯ, ಪುತ್ತೂರು, ಮಂಗಳೂರು ಹೀಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗದ ನಿಮಿತ್ತ ಸಾಕಷ್ಟು ಜನರು ನಿತ್ಯ ಪ್ರಯಾಣ ಮಾಡುತ್ತಾರೆ. ಈ ಮೊದಲು ಮಡಪ್ಪಾಡಿ ಗ್ರಾಮದಿಂದ ಬೆಳಗ್ಗೆ 7 ಗಂಟೆಗೆ ಹೊರಟ ಬಸ್ಸು ಎಲಿಮಲೆ – ಉಬರಡ್ಕ ಮಾರ್ಗವಾಗಿ ಬೆಳಗ್ಗೆ 8:05 ಕ್ಕೆ ಸುಳ್ಯ ತಲುಪುತ್ತಿತ್ತು.

Karnataka: KSRTC resumes bus services, online ticket booking available,  Government News, ET Government

ಆದರೆ ಕೆಲ ತಾಂತ್ರಿಕ ತೊಂದರೆಗಳಿಂದಾಗಿ ಈ ಬಸ್ಸಿನ ವೇಳೆಯನ್ನು 8:30 ಕ್ಕೆ ಬದಲಾಯಿಸಲಾಯಿತು. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳುವವರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆ. ಏಕೆಂದರೆ 8:30 ರ ಆಸುಪಾಸಿನಲ್ಲಿ ಹೊರಡುವ ಬಸ್ಸು 9:30 ಕ್ಕೆ ತಲುಪುವುದರಿಂದ ಸೂಕ್ತ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಬಸ್ ಇಲ್ಲದ್ದರಿಂದ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮೊದಲು ಮಡಪ್ಪಾಡಿ ಮತ್ತು ಸುಳ್ಯ ಮಾರ್ಗದಲ್ಲಿ ರಸ್ತೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಬಸ್ಸಿನ ಸಂಚಾರವನ್ನು ನಿಯಂತ್ರಿಸಲಾಗಿತ್ತು. ಆದರೆ ಈಗ ಮಡಪ್ಪಾಡಿ- ಸೇವಾಜೆ ರಸ್ತೆಯ ದುರಸ್ಥಿಯಾಗಿದ್ದರೂ ಬಸ್ಸಿನ ಸಂಚಾರ ಮಾತ್ರ ಸೂಕ್ತವಾಗಿಲ್ಲ. ಇದರಿಂದಾಗಿ ಸಾಕಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ. ಈ ಸಂಬಂಧ ಸಾರಿಗೆ ಅಧಿಕಾರಿಗಳು ಮಡಪ್ಪಾಡಿ ಮತ್ತು ಸುಳ್ಯ ನಡುವೆ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಬಸ್ ಸೇವೆಯನ್ನು ಪುನರಾರಂಭಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಮೇಘನ ಮಡಪ್ಪಾಡಿ
ಪ್ರಥಮ ಬಿ.ಎ.ಪತ್ರಿಕೋದ್ಯಮ ವಿಭಾಗ
ವಿ.ವಿ. ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here