ಪೈಲಾರಿನಲ್ಲಿ ರಂಜಿಸಿದ ಯಕ್ಷೋತ್ಸವ ದಶ ಸಂಭ್ರಮ

0

 

ಹಿರಿಯ ಕಲಾವಿದ ಯುವರಾಜ್ ಜೈನ್ ರಿಗೆ ಯಕ್ಷೋತ್ಸವ- 2022 ಪ್ರಶಸ್ತಿ ಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ

ಯಕ್ಷಗಾನ ಕಲೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಹಿಂಜರಿಯದ ಅಪರೂಪದ ಮೇರು ಕಲಾವಿದ ಜೈನ್: ಕೇನಾಜೆ

ಫ್ರೆಂಡ್ಸ್ ಕ್ಲಬ್ ಪೈಲಾರು ಹಾಗೂ ಶೌರ್ಯ ಯುವತಿ ಮಂಡಲ ಇದರ ಸಹಯೋಗದಲ್ಲಿ ಪೈಲಾರು ಶಾಲಾ ವಠಾರದಲ್ಲಿ 2 ದಿನಗಳ ಕಾಲ ರಂಜಿಸಿದ ಯಕ್ಷೋತ್ಸವ 2022 ಇದರ ಸಮಾರೋಪ ಸಮಾರಂಭ ಹಾಗೂ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಅ.23 ರಂದು ಜರುಗಿತು.
ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ‌ ಸುಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ಕೆ.ವಿ.ರೇಣುಕಾ ಪ್ರಸಾದ್ ರವರು ಹಿರಿಯ ಯಕ್ಷಗಾನ ಕಲಾವಿದ ಯವರಾಜ್ ಜೈನ್ ರವರಿಗೆ ಯಕ್ಷೋತ್ಸವ 2022 ಪ್ರಶಸ್ತಿ ಪ್ರಧಾನ ಮಾಡಿದರು.

 

ಕಳೆದ 10 ವರ್ಷಗಳಿಂದ ಯಕ್ಷೋತ್ಸವದ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ರಾದ ಚಿನ್ನಪ್ಪ ಕೆರೆಮೂಲೆ ಮತ್ತು ಖುಷಿಯೋಂಕಾ ಆಶಿಯಾನಾ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಗಳಿಸಿದ ಸಂಘದ ಗೌರವಾಧ್ಯಕ್ಷ ತೇಜಸ್ವಿ ಕಡಪಳ , ಹಿರಿಯರ ಕ್ರೀಡಾ ಕೂಟದಲ್ಲಿ ರಾಜ್ಯ ಮಟ್ಟದಲ್ಲಿ ಪದಕ ವಿಜೇತೆ ಕ್ರೀಡಾಪಟು ಶ್ರೀಮತಿ ರಾಜೀವಿ ಗೋಳ್ಯಾಡಿ ಯವರನ್ನು ಯುವತಿ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಜನಪದ ಸಂಶೋಧಕ ಶಿಕ್ಷಕ ಡಾ. ಸುಂದರ ಕೇನಾಜೆ ಅಭಿನಂದನಾ ಭಾಷಣ ಮಾಡಿದರು. ಕೊಡಗು ವಿರಾಜಪೇಟೆ ನಿವೃತ್ತ ಖಜನಾಧಿಕಾರಿ ಸಂಜೀವ ಮಡಪ್ಪಾಡಿ, ಶ್ರೀಮತಿ ಪ್ರಸನ್ನ ಯುವರಾಜ್ ಜೈನ್ ಉಪಸ್ಥಿತರಿದ್ದರು. ಯುವತಿ ಮಂಡಲದ ಸದಸ್ಯೆಕು.ಅನುಜ್ಞಾಸಂಕೇಸ ಪ್ರಾರ್ಥಿಸಿದರು, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜೈದೀಪ್ ಕಡಪಳ ಸ್ವಾಗತಿಸಿದರು. ಯುವತಿ ಮಂಡಲದ ಅಧ್ಯಕ್ಷೆ ಚರಿಷ್ಮ ಕಡಪಳ ವಂದಿಸಿದರು. ನಿರ್ದೇಶಕಿ ಸುಷ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಶೌರ್ಯ ಯುವತಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕ ರಾಗಿ ಸಹಕರಿಸಿದರು. ಅಪರಾಹ್ನ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದ ಯಕ್ಷಗಾನ ಪೂರ್ವ ರಂಗ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಬಳಿಕ ಯಕ್ಷ ಪರಂಪರೆ ಯಕ್ಷಗಾನ ಪ್ರದರ್ಶನಗೊಂಡಿತು. ಸಂಜೆ ರಾಘವ ನಂಬಿಯಾರ್ ವಿರಚಿತ ಅಮರೇಂದ್ರ ಪದ ವಿಜಯ ಪ್ರದರ್ಶನವಾಯಿತು. ರಾತ್ರಿ ಜತ್ತಿ ಈಶ್ವರ ಭಾಗವತ ವಿರಚಿತ, ಕಲಾವಿದ ಜಯಾನಂದ ಸಂಪಾಜೆ ಯವರ ಸಂಯೋಜನೆಯಲ್ಲಿ ಮಕರಾಕ್ಷ ಕಾಳಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಎರಡು ದಿನಗಳ ಕಾಲ ನಡೆದ ಯಕ್ಷೋತ್ಸವದಲ್ಲಿ ಊರ ಹಾಗೂ ಪರ ಊರ ಕಲಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದರು. ಆಗಮಿಸಿದ ಎಲ್ಲರಿಗೂ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಳೆಯಿಂದ ಅಡಚಣೆಯಾಗದಂತೆ ಸಭಾಂಗಣಕ್ಕೆ ಶೀಟ್ ಅಳವಡಿಸಿ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here