ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಧರ್ಮಸ್ಥಳ ಯೋಜನೆಯ ಸದಸ್ಯರಿಂದ ಶ್ರಮದಾನ

0

ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ನೇಮ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂಜಿಬಾಳ್ತಿಲ ಒಕ್ಕೂಟದ ಸದಸ್ಯರು ಶ್ರಮದಾನ ನಡೆಸಿದರು.

 


ತೆಂಗಿನ ಗರಿಯ ತಟ್ಟಿ ಹೆಣೆಯುವುದು, ಸೇರಿದಂತೆ ಇತರೆ ಕೆಲಸಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ವತಿಯಿಂದ ಸದಸ್ಯರಿಗೆ ಪ್ರಸಾದ ನೀಡಲಾಯಿತು. ನೂಜಿಬಾಳ್ತಿಲ ಸೇವಾಪ್ರತಿನಿಧಿ ಗೀತಾ, ಒಕ್ಕೂಟ ಅಧ್ಯಕ್ಷ ಪುರುಷೋತ್ತಮ, ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ದೈವಸ್ಥಾನದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here