ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ – ಗಾಯಾಳು, ಡಿಕ್ಕಿ ಹೊಡೆದ ವಾಹನ ಮಾಹಿತಿಗಾಗಿ ಪೊಲೀಸ್ ಮನವಿ

0

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾದ ಘಟನೆ ಮಾ.15ರ ನಸುಕಿನ ಜಾವ ಉಪ್ಪಿನಂಗಡಿ ಸಮೀಪದ ನೇಜಿಗಾರು ಎಂಬಲ್ಲಿ ನಡೆದಿದ್ದು, ಗಾಯಾಳು ಮಾತನಾಡದ ಸ್ಥಿತಿಯಲ್ಲಿರುವುದರಿಂದ ವ್ಯಕ್ತಿ ಪರಿಚಯ ಸಿಗದ ಮತ್ತು ಇತ್ತ ಕಡೆ ಡಿಕ್ಕಿ ಹೊಡೆದ ವಾಹನದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿ ಸಮೀಪದ ನೇಜಿಗಾರು ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದೆ. ಈ ವೇಳೆ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ವ್ಯಕ್ತಿ ಮಾತ್ರ ಮಾತನಾಡದ ಸ್ಥಿತಿಯಲ್ಲಿರುವುದರಿಂದ ಅವರ ಗುರುತು ಪರಿಚಯ ಪತ್ತೆಯಾಗಿಲ್ಲ. ಇತ್ತ ಕಡೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನದ ಗುರುತು ಕೂಡಾ ಪತ್ತೆಯಾಗಿಲ್ಲ. ಹಾಗಾಗಿ ಗಾಯಾಳು ವ್ಯಕ್ತಿಯ ಪರಿಚಯ ಮತ್ತು ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಕುರಿತು ಮಾಹಿತಿ ಇದ್ದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here