ಸಿನಿಮಾ ಜಗತ್ತಿನಲ್ಲೇ ಹವಾ ಸೃಷ್ಟಿಸಿದ, ನೈಜ ಘಟನೆ ಆಧಾರಿತ `ದಿ ಕಾಶ್ಮೀರಿ ಫೈಲ್ಸ್’ ನಾಳೆಯಿಂದ (ಮಾ.17) ಅರುಣಾ ಚಿತ್ರಮಂದಿರದಲ್ಲಿ…

0

ಪುತ್ತೂರು: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ದಿ ಕಾಶ್ಮೀರಿ ಫೈಲ್ಸ್ ಬಾಲಿವುಡ್ ಸಿನಿಮಾವನ್ನು ತಯಾರಿಸಲಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಅಭಿಷೇಕ್ ಅಗರ್‌ವಾಲ್ ಬಂಡವಾಳ ಹೂಡಿದ್ದಾರೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ನೈಜ ಕಥಾಹಂದರವನ್ನು ಹೊಂದಿದ ದಿ ಕಾಶ್ಮೀರ್ ಫೈಲ್ಸ್ ಈಗಾಗಲೇ ಸಖತ್ ಹವಾ ಸೃಷ್ಟಿಸಿದೆ. ರಾಜಕೀಯ ಕ್ಷೇತ್ರದ ಅಗ್ರಗಣ್ಯ ನಾಯಕರುಗಳೇ ಈ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಶಾಲಾ ಪಠ್ಯಗಳಲ್ಲಿ ಮರೆಮಾಚಿದ ಸತ್ಯಗಳನ್ನು ತೆರೆದಿಡುವ ಪ್ರಯತ್ನ ಈ ಚಿತ್ರದಲ್ಲಾಗಿದೆ ಎನ್ನಲಾಗಿದೆ. ಚಿತ್ರದಲ್ಲಿ ಅನುಪಂ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಷಿ ಸಹಿತ ಹಲವು ಮಂದಿ ಕಲಾವಿದರು ಅಭಿನಯಿಸಿದ್ದಾರೆ.

 

 

ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ದಿ ಕಾಶ್ಮೀರಿ ಫೈಲ್ಸ್ (ಹಿಂದಿ) ಮಾ.17  ರಿಂದ ದಿನಾ 4 ದೇಖಾವೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಳಿಗ್ಗೆ 10.45, ಮಧ್ಯಾಹ್ನ 2ಗಂಟೆ, ಸಂಜೆ ೫.೪೫ ಮತ್ತು ರಾತ್ರಿ 9 ಗಂಟೆಗೆ ಚಿತ್ರಪ್ರದರ್ಶನಗೊಳ್ಳಲಿದೆ. ಚಿತ್ರಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿ ಕಾಶ್ಮೀರಿ ಫೈಲ್ಸ್ ಚಿತ್ರವೀಕ್ಷಣೆ ಮಾಡುವಂತೆ ಚಿತ್ರಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here