ಸುಳ್ಯ ಗುರು ರಾಘವೇಂದ್ರ ಮಠದಲ್ಲಿ ರಂಗ ಪೂಜೆ ಮತ್ತು ಭಜನಾ ಕಾರ್ಯಕ್ರಮ

0

 

ಸುಳ್ಯ ಪಯಸ್ವಿನಿ ನದಿ ತಟದಲ್ಲಿ ಇರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಅ.27 ರಂದು ವಿಶೇಷವಾಗಿ ರಂಗ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಅರ್ಚಕ ಶ್ರೀ ಹರಿ ಎಳಚಿತ್ತಾಯ ಮತ್ತು ರವಿರಾಜ ನಾವಡ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಗೋಪಾಲ್ ರಾವ್ ಮತ್ತು ಮನೆಯವರು ಸೇವಾ ರೂಪದಲ್ಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಭಕ್ತಾದಿಗಳು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಸಂಧ್ಯಾ ಕಾಲದಲ್ಲಿ ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಗಿ ರಾತ್ರಿ ಅನ್ನ ಸಂತರ್ಪಣೆಯು ನಡೆಯಿತು.

LEAVE A REPLY

Please enter your comment!
Please enter your name here