ಉಪ್ಪಿನಂಗಡಿ:ಮಾಂಡೋವಿ ಮೋಟಾರ್‍ಸ್‌ನಲ್ಲಿ ಹೊಸ ವ್ಯಾಗನರ್ ಬಿಡುಗಡೆ

0

ಪುತ್ತೂರು: ಕಾರುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಮಾರುತಿ ಸುಜ್ಹುಕಿ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹೊಸ ವ್ಯಾಗನರ್ ಕಾರನ್ನು ಕಂಪನಿಯ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್ ಉಪ್ಪಿನಂಗಡಿ ಶಾಖೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಉದ್ಯಮಿ ಪ್ರವೀಣ್ ಭಂಡಾರಿಯವರು ಕಾರನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಕ ರೋಹಿತಾಶ್ವ, ಪ್ರಗತಿಪರ ಕೃಷಿ ಉಪೇಂದ್ರ ಎ.ಗೌಡ, ಉಪಸ್ಥಿತರಿದ್ದರು. ಮಾಂಡೋವಿ ಮೋಟಾರ್‍ಸ್‌ನ ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ್ ಸನಿಲ್, ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ಸ್ವಾಗತಿಸಿ, ಸತ್ಕರಿಸಿದರು. ಸಿಬಂದಿ ಹರ್ಷ ಕಾರ್ಯಕ್ರಮ ನಿರೂಪಿಸಿದರು.

ಹಲವು ವೈಶಿಷ್ಠ್ಯತೆಗಳನ್ನು ಹೊಂದಿರುವ ಹೊಸ ವ್ಯಾಗನರ್ ಕಾರಿನಲ್ಲಿ ವಿಶೇಷವಾಗಿ ಪ್ರಾರಂಭ-ನಿಲುಗಡೆಯೊಂದಿಗೆ ಸುಧಾರಿತ ಕೆ-ಇಂಜಿನ್, ಡೈನಾಮಿಕ್ ಮಿಶ್ರಲೋಹದ ಚಕ್ರಗಳು, ಸ್ಟೈಲಿಸ್ ಡ್ಯುಯಲ್ ಟೋನ್ ಎಕ್ಸಟೀರಿಯರ್, ಸ್ಟೇರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಮೊದಲಾದ ವಿಶೇಷತೆಗಳನ್ನು ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ೨೫.೧೯ ಕಿ.ಮೀ ಇಂದನ ದಕ್ಷತೆ ಹಾಗೂ ಸಿಎನ್‌ಜಿಯಲ್ಲಿ ೩೪.೦೫ ಕಿ.ಮೀ ಇಂಧನ ದಕ್ಷತೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ ೯೮೪೫೫೦೬೫೯೬ ನಂಬರ್‌ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here