ನ.6; ದುಗ್ಗಲಡ್ಕದಲ್ಲಿ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ- ಕೆಸರ್ಡ್ ಒಂಜಿ ದಿನ

0

 

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮುಕ್ತ ಕೆಸರುಗದ್ದೆ ಪಂದ್ಯಾಟ

ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮುಕ್ತ ಕೆಸರು ಗದ್ದೆ ಕ್ರೀಡಾ ಕೂಟ – ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನ.6 ರಂದು ಪೂ‌.9ರಿಂದ ನೀರಬಿದಿರೆ ಮದಕ ದಿ.ರಾಮಕೃಷ್ಣ ನಾಯಕ್ ರ ಗದ್ದೆಯಲ್ಲಿ ನಡೆಯಲಿದೆ.
ಕೆಸರು ಗದ್ದೆ ಹಗ್ಗ ಜಗ್ಗಾಟ ನಡೆಯಲಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.10,010 ಮತ್ತು ದ್ವಿತೀಯ ಬಹುಮಾನ ರೂ.7777, ತೃತೀಯ ಮತ್ತು ಚತುರ್ಥ ಬಹುಮಾನದೊಂದಿಗೆ ಟ್ರೋಫಿ, ಮಹಿಳೆಯರ ವಿಭಾಗದಲ್ಲಿ ‌ಪ್ರಥಮ ರೂ.5555 ,ದ್ವಿತೀಯ ರೂ3555,ತೃತೀಯ ಹಾಗೂ ಚತುರ್ಥ ಬಹುಮಾನದೊಂದಿಗೆ ಟ್ರೋಫಿ ನೀಡಲಾಗುವುದು.
10 ವರ್ಷ ಮೇಲ್ಪಟ್ಟ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಫರ್ಧೆಗಳು ನಡೆಯಲಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅದೇ ದಿನ ಬೆಳಿಗ್ಗೆ 10ಗಂಟೆಯ ಒಳಗೆ ಹೆಸರು ನೊಂದಾಯಿಸಬೇಕೆಂದು ಸಂಘಟಕರು ತಿಳಿಸಿದರು.

LEAVE A REPLY

Please enter your comment!
Please enter your name here