ಹಿರಿಯ ನಾಗರಿಕ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮತ ಚಲಾಯಿಸದಂತೆ ಚಳವಳಿ – ಮನವಿ

0

ಪುತ್ತೂರು: ಹಿರಿಯ ನಾಗರಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಸಕಾಲದಲ್ಲಿ ಸ್ಪಂಧನೆ ಸಿಗದಿದ್ದರೆ ಮುಂದಿನ ಸ್ಥಳೀಯ ಮತ್ತು ಉನ್ನತ ಚುನಾವಣೆಗಳಲ್ಲಿ ಹಿರಿಯ ನಾಗರಿಕರು ಮತ ಚಲಾಯಿಸದಂತೆ ದೇಶದಾದ್ಯಂತ ಚಳವಳಿ ರೂಪಿಸಲಾಗುವುದು ಎಂದು ಪಡ್ನೂರು ಗ್ರಾಮದ ರಾಮನಗರ ನಿವಾಸಿ ಸುದರ್ಶನ್ ಗೌಡ ಅವರು ಪುತ್ತೂರು ಸಹಾಯಕ ಕಮೀಷನರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

 

ಅಧಿಕಾರಿಗಳು ಹೊಣೆಗಾರಿಕೆ ಮತ್ತು ಅಪವಾದ ಹಾಗೂ ಅಪರಾಧ ಪ್ರಜ್ಞೆಯಿಂದ ನಮ್ಮ ಮನವಿಗಳನ್ನು ಪುಷ್ಟಿ ಕರಿಸುವುದಿಲ್ಲ ಮತ್ತು ಮುಂದಿನ ಕ್ರಮಕ್ಕೆ ಒಪ್ಪಿಸುತ್ತಿಲ್ಲ. ಪಂಚಾಯತ್ ಮಟ್ಟದಲ್ಲಿ ಪಕ್ಷಗಳು ಮತ್ತು ಅಧಿಕಾರಿಗಳು ವಯಸ್ಕರ ಪಡಿತರ ಚಿಟಿಯನ್ನು ಬೇರ್ಪಡಿಸಿ ಪ್ರತ್ಯೇಕ ಇಲ್ಲವೇ ಒಂದೇ ಸೂರಿನಲ್ಲಿ ವಾಸಮಾಡುವಂತೆ ಕಲ್ಪಿಸಿ ಇತರ ಕುಟುಂಬ ಸದಸ್ಯರು ತೆರಿಗೆ ಪಾವತಿ ಮತ್ತು ಲಕ್ಷುರಿ ಜೀವನ ಅನುಭವಿಸುತ್ತಿದ್ದಾರೆ. ಇಂತಹ ಅಪರಾಧ ವನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿಲ್ಲ ಮತ್ತು ಸರಕಾರಕ್ಕೆ ನಷ್ಟ ವಾಗುತ್ತಿರುವ ಕೊಟ್ಯಂತರ ಉಚಿತ ಬಿಪಿಎಲ್ ಎಪಿಎಲ್ ಅಕ್ಕಿ ಕಾಳಸಂತೆ, ಮರು ಮಾರಾಟ ವಿದೇಶ ರಫ್ತು ಮೂಲಕ ನಷ್ಟ ವನ್ನು ನಿಯಂತ್ತಿಸುತ್ತಿಲ್ಲ. ಸರಕಾರಿ ನೌಕರಿ ನಿವೃತ್ತರು ಸ್ವಯಂ ಪಿಂಚಣಿ ಇಲ್ಲವೇ ಕುಟುಂಬ ಪಿಂಚಣಿಯಲ್ಲಿ ಜೀವನ ನಿರ್ವಹಿಸುತ್ತಿದ್ದು ಖಾಸಗಿ ಸಂಘ, ಸಂಸ್ಥೆ, ಕಂಪೆನಿ,ಶಾಲೆ ಕಾಲೇಜುಗಳಲ್ಲಿ ದುಡಿವವರು ಇಪಿಎಫ್‌ಎಫ್ ೯೫ ಯೋಜನೆ ಮತ್ತು ಎನ್‌ಪಿಎಸ್ ಯೋಜನ ಪಿಂಚಣಿ ಯಲ್ಲಿ ಬಿಕ್ಷುಕರಿಗಿಂತ ಕೀಳಾಗಿ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಯನ್ನು ರಾಜ್ಯ ಸರಕಾರಕೇಂದ್ರ ಸರಕಾರ ನಿರ್ಮಾಣ ಮಾಡಿದೆ. ಬಡತನವನ್ನು ಹೋಗಲಾಡಿಸಲು ಕೇಂದ್ರ ಸರಕಾರ ಕ್ರಮ ಜರುಗಿಸಲು ರಾಷ್ಟ್ರಪತಿಗಳು ಶಿಫಾರಸ್ಸು ಮಾಡತಕ್ಕದ್ದು. ಈ ಎಲ್ಲಾ ಬೇಡಿಕೆಗಳಿಗೆ ಸ್ಪಂದನೆ ದೊರಕದಲ್ಲಿ ಮುಂದಿನ ಸ್ಥಳೀಯ ಮತ್ತು ಉನ್ನತ ಚುನಾವಣೆಗಳಲ್ಲಿ ಹಿರಿಯ ನಾಗರಿಕರು ಮತ ಚಲಾಯಿಸದಂತೆ ದೇಶದಾದ್ಯಂತ ಚಳವಳಿ ರೂಪಿಸಲಾಗುವುದು ಎಂಬುದಾಗಿ ಸುದರ್ಶನ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here