ಕಾಣಿಯೂರು ಏಲಡ್ಕದಲ್ಲಿ 14ನೇ ಪ್ರತಿಷ್ಠಾ ವಾರ್ಷಿಕೋತ್ಸವ,48 ಕಾಯಿಯ ಶ್ರೀ ಗಣಪತಿ ಹೋಮ

0

ಕಾಣಿಯೂರು: ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿರುವ ಶ್ರೀ ಶಿರಾಡಿ ರಾಜನ್ ದೈವ ಮತ್ತು ಶ್ರೀ ಚಾಮುಂಡಿ ದೈವ ಹಾಗೂ ಶ್ರೀ ಪರಿವಾರ ದೈವಗಳ ಪ್ರತಿಷ್ಠಾ 14ನೇ ವಾರ್ಷಿಕೋತ್ಸವ ಹಾಗೂ 48 ಕಾಯಿಯ ಶ್ರೀ ಗಣಪತಿ ಹೋಮವು ಮಾ.16ರಂದು ನಡೆಯಿತು. ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದೈವತಾ ಪ್ರಾರ್ಥನೆ, ಕಲಶಾಭಿಷೇಕ, 48 ಕಾಯಿಯ ಗಣಪತಿ ಹೋಮ, ಪೂರ್ಣಾಹುತಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮೊಕ್ತೇಸರಾದ ರೋಹಿತ್ ಅನಿಲ, ವಸಂತ ಗೌಡ ಕಂಪ, ಕಾರ್ಯಕಾರಿ ಸಮಿತಿಯ ಗೋಪಾಲಕೃಷ್ಣ ಗೌಡ ಎಳುವೆ, ಕಾರ್ಯದರ್ಶಿ ಎಂ.ಪಿ. ಪರಮೇಶ್ವರ ಗೌಡ ಮುಗರಂಜ, ಕೋಶಾಧಿಕಾರಿ ರವೀಂದ್ರ ಅನಿಲ, ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗರಂಜ ಸೇರಿದಂತೆ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here