ಜಯನಗರ: ಈದ್ ಮೀಲಾದ್ ಆಚರಣೆ ಮತ್ತು 5ನೇ ವರ್ಷದ ಅಜ್ಮೀರ್ ವಾರ್ಷಿಕ ಮೌಲಿದ್

0

 

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದರಸ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆ ಮತ್ತು ಐದನೆಯ ವರ್ಷದ ಅಜ್ಮೀರ್ ವಾರ್ಷಿಕ ಮೌಲಿದ್ ಕಾರ್ಯಕ್ರಮ ಅಕ್ಟೋಬರ್ 26ರಂದು ಜಯನಗರ ಮದರಸ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಜಾಹಿರ್ ಜಯನಗರ ವಹಿಸಿದ್ದರು.
ಮಧ್ಯಾಹ್ನ  ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಕಾಫಿ ರವರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ಮತ್ತು ಮಂಕುಸ್ ಮೌಲಿದ್ ಪಾರಾಯಣ ನಡೆಯಿತು. ಸಯ್ಯದ್ ಜೈನುಲ್ ಆಬಿದಿನ್ ತಂಗಳ್ ಜಯನಗರ ದುವಾ ನೆರವೇರಿಸಿದರು.
ನಂತರ ಮದರಸ ವಿದ್ಯಾರ್ಥಿಗಳ ಈದ್ ಮಿಲಾದ್ ಫೆಸ್ಟ್ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ, ಮತ್ತು ಅಧ್ಯಾಪಕರುಗಳು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮೊಗರ್ಪಣೆ ಮಸ್ಜಿದ್ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಕಾಫಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಖ್ಯಾತ ಪಂಡಿತರು ಅಸ್ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ ಮೀಲಾದ್ ಸಂದೇಶವನ್ನು ನೀಡಿ ಪ್ರಾರ್ಥನೆ ನಡೆಸಿದರು.
ಖ್ಯಾತವಾಗ್ಮಿ ನೌಫಾಲ್ ಸಕಾಫಿ ಕಳಸ ಪೈಗಂಬರ್ ಮೊಹಮ್ಮದ್ ರವರ ವಫಾತ್ ವಿಷಯದ ಕುರಿತು ಸಂದೇಶ ಭಾಷಣ ನೆರವೇರಿಸಿದರು.
ವೇದಿಕೆಯಲ್ಲಿ ಮೊಗರ್ಪಣೆ ಕೇಂದ್ರ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷರುಗಳಾದ ಸಿಎಂ ಉಸ್ಮಾನ್, ಹಾಜಿ ಉಮ್ಮರ್ ಎಚ್ ಎ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ, ನಿರ್ದೇಶಕ ಸಂಶುದ್ದೀನ್ ಎಸ್ ಅರಂಬೂರು, ಮೊಗರ್ಪಣೆ ಮದರಸ ಸದರ್ ಮೊಅಲ್ಲಿಂ ಮಹಮ್ಮದ್ ಸಕಾಫಿ, ಮೊಅಲ್ಲಿಮರಾದ ಹಂಸ ಸಕಾಫಿ, ಅಬ್ದುಲ್ ನಾಸಿರ್ ಸಕಾಫಿ, ಯೂಸುಫ್ ಮುಸ್ಲಿಯಾರ್, ಮೂಸಮುಸ್ಲಿಯಾರ್,ಮಾಜಿ ಸದರ್ ಮುಅಲ್ಲಿಮ್ ಅಬ್ದುಲ್ ರಜಾಕ್ ಮುಸ್ಲಿಯಾರ್, ಹಾಜಿ ರಿಯಾಜ್ ಕೈಯಾರ್, ಜಯನಗರ ಮಸ್ಜಿದ್ ಮದರಸ ಕಮಿಟಿ ಉಪಾಧ್ಯಕ್ಷ ಮಹಮ್ಮದ್ ಮುಟ್ಟತ್ತೋಡಿ, ಪ್ರಧಾನ ಕಾರ್ಯದರ್ಶಿ ಕೆ ಉಸ್ಮಾನ್, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ಲಾ ಹಾಜಿ ಜಯನಗರ, ಹಮೀದ್ ಎಂಕೆ, ಅಬೂಬಕ್ಕರ್ ಡಿ ಎಂ, ಸ್ಥಳೀಯ ಮುಖಂಡರುಗಳಾದ ಇಬ್ರಾಹಿಂ ಎಸ್ ಎ, ಇಬ್ರಾಹಿಂ ಡಿ, ಅಬ್ಬಾಸ್ ಪಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಳ್ಯ ಬ್ಲಡ್ ಸೈಬೋ ಸಮಿತಿಯ ಸದಸ್ಯ ವಾಟ್ಸಪ್ ಗ್ರೂಪ್ ಮೂಲಕ ದಾನಿಗಳ ಸಹಕಾರ ಪಡೆದು ನೂರಾರು ಮಂದಿ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ಕೆ, ಮತ್ತು ಬಡ ರೋಗಿಗಳ ಚಿಕಿತ್ಸೆಗೆ ಧನಸಹಾಯ ಮಾಡಿ ಗುರುತಿಸಿಕೊಂಡಿರುವ ಜಯನಗರದ ಯುವಕ ಶರೀಫ್ ರವರಿಗೆ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
ಸಮಿತಿಯ ಪದಾಧಿಕಾರಿಗಳು ಸದಸ್ಯರು ಸ್ಥಳೀಯ ಯುವಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

 

 

 

 

LEAVE A REPLY

Please enter your comment!
Please enter your name here