(ಮಾ.17) ಇಂದಿನಿಂದ ನಾಲ್ಕು ದಿನ ಮಂಗಳೂರು, ಬೆಂಗಳೂರು ರೈಲು ಸಂಚಾರ ರದ್ದು

0

ಪುತ್ತೂರು: ಹುಬ್ಬಳ್ಳಿ ನೈಋತ್ಯ ರೈಲ್ವೇ ವಲಯ ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡು ಮಾರ್ಗ ಕಾಮಗಾರಿ ನಿಮಿತ್ತ ಕೆಲವು ರೈಲುಗಳ ಸೇವೆ ಮಾ.17 ರಿಂದ 20ರ ತನಕ ರದ್ದುಗೊಳಿಸಲಿದೆ.


ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (06488) ಸೇವೆಯು ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಹಾಗೂ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (06489) ಸೇವೆಯು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹಾಗೂ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (06487) ಸೇವೆಯು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹಾಗೂ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (06486) ಸೇವೆಯು ಕಬಕ ಪುತ್ತೂರು ನಿಲ್ದಾಣದಿಂದ ಹಾಗೂ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು (16575) ಸೇವೆಯು ಯಶವಂತಪುರ ನಿಲ್ದಾಣದಿಂದ ಸಂಚರಿಸುವುದಿಲ್ಲ ಎಂದು ರೈಲ್ವೇ ಮಾಹಿತಿ ಲಭ್ಯವಾಗಿದೆ.

ಮಂಗಳೂರು, ವಿಜಯಪುರ ರೈಲು ಸಂಚಾರ 8 ದಿನ ರದ್ದು
ಮಂಗಳೂರಿನಿಂದ ಪುತ್ತೂರು ಆಗಿ ವಿಜಯಪುರಕ್ಕೆ ಹೋಗುವ ರೈಲು ಮಾ.17ರಿಂದ 23ರ ತನಕ ರದ್ದುಗೊಳಿಸಲಾಗಿದೆ. ಗದಗ್‌ನಲ್ಲಿ ರೈಲ್ವೇ ಹಳಿಯ ಕೆಲಸ ಕಾರ್ಯ ನಡೆಯುತ್ತಿರುವುದರಿಂದ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here