ಅಮರಮುಡ್ನೂರು ಪಂಚಾಯತ್ ನಲ್ಲಿ ಕೋಟಿಕಂಠ ಗೀತಾ ಗಾಯನ ಕಾರ್ಯಕ್ರಮ

0

 

67 ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನಾದ್ಯಂತ ಆಯೋಜಿಸಲಾದ ಕೋಟಿಕಂಠ ಗೀತಗಾಯನ ಕಾರ್ಯಕ್ರಮವನ್ನು ಅಮರಮುಡ್ನೂರು ಪಂಚಾಯತ್ ನಲ್ಲಿ ಅ. 28 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮ ಪ್ರಿಯ ಮೇಲ್ತೋಟ,ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ ಹಾಗೂ ಸದಸ್ಯರು, ಪಿ.ಡಿ.ಒ ಆಕಾಶ್ ಮತ್ತು ಸಿಬ್ಬಂದಿ ವರ್ಗದವರು,ಗ್ರಂಥಾಲಯ ಮೇಲ್ವಿಚಾರಕರು, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರುನಾಡಿನ ಗೀತೆಗಳನ್ನು ಸಮೂಹವಾಗಿ ಹಾಡಿ ಕನ್ನಡ ನಾಡಿನ ವೈಶಿಷ್ಟ್ಯತೆಯನ್ನು ಬಿಂಬಿಸಿದರು .


ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿ ಎಲ್ಲರೂ ಸಂಕಲ್ಪ ವಿಧಿ ಕೈಗೊಂಡರು.

LEAVE A REPLY

Please enter your comment!
Please enter your name here