ಮಾ.19ಕ್ಕೆ ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಹಿನ್ನೆಲೆ – ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ

0

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲ ಸ್ಥಾನವಾದ ಕಬಕ ಗ್ರಾಮದ ಕಾರ್ಜಾಲಿನಲ್ಲಿ ಮಾ.19ರಂದು ನಡೆಯಲಿರುವ ಕಾರ್ಜಾಲು ದೊಂಪದ ಬಲಿ ಜಾತ್ರೋತ್ಸವದ ಪ್ರಚಾರಾರ್ಥವಾಗಿ ಮಾ.17ರಂದು ರಂದು ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ನಡೆಯಿತು.

 

ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಆಮಂತ್ರಣ ಪತ್ರ ವಿತರಣೆಗೆ ಚಾಲನೆ ನೀಡಲಾಯಿತು. ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಆಮಂತ್ರಣ ವಿತರಣೆಯನ್ನು ಉದ್ಘಾಟಿಸಿದರು. ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಕಾರ್ಜಾಲು ಶ್ರೀ ಧೂಮಾವತಿ ದೈವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಪ್ರಭು, ರವಿಕಿರಣ್ ನೆಲಪ್ಪಾಲು, ಪ್ರಶಾಂತ್, ಸುನಿತಾ, ಪ್ರಸಾದ್ ಬಿಟೀಕೆ, ನಗರಸಭಾ ಸದಸ್ಯ ಶಿವರಾಮ ಸಪಲ್ಯ, ಜಾತ್ರೋತ್ಸವ ಸಮಿತಿ ಸದಸ್ಯರಾದ ಪ್ರಶಾಂತ್ ಮುರ, ಕಿರಣ್ ಅಜೇಯನಗರ, ಸತೀಶ್ ಶೆಟ್ಟಿ ಕಲ್ಲೇಗ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here