ಲಕ್ಷ್ಮೀ ಪಟಾಕಿ ಅಂಗಡಿಯವರ ದೀಪಾವಳಿ ಹಬ್ಬದ ಲಕ್ಕಿ ಕೂಪನ್ ಡ್ರಾ ಫಲಿತಾಂಶ- ಬಹುಮಾನ ವಿತರಣೆ

0

ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ರಾಜಶ್ರೀ ಸಂಕೀರ್ಣ ಬಳಿಯಲ್ಲಿ ಇಂಜಿನಿಯರ್ ಸೂರಜ್ ಕೊಡಿಯಾಲಬೈಲ್ ಮತ್ತು ತಿಲಕ್ ದೀಟಿಗೆಯವರ ಪಾಲುದಾರಿಕೆಯ ಲಕ್ಷ್ಮೀ ‌ಪಟಾಕಿ ಅಂಗಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ಪ್ರತಿ ಖರೀದಿಗೆ ಗ್ರಾಹಕರಿಗೆ ಲಕ್ಕಿ ಕೂಪನ್ ಇದರ ಡ್ರಾ ಫಲಿತಾಂಶ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಅ.28 ರಂದು ನಡೆಯಿತು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅ.23 ರಿಂದ 26 ರ ತನಕ ಪಟಾಕಿ ಖರೀದಿಸಿದ ಎಲ್ಲಾ ಗ್ರಾಹಕರಿಗೆ ಕೂಪನ್ ನೀಡಿ ಅದೇ ದಿನ ಡ್ರಾ ಮಾಡಲಾಯಿತು. ಅ.26 ರಂದು ಬಂಪರ್ ಬಹುಮಾನದ ಡ್ರಾ ವನ್ನು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಹೋಟೆಲ್ ದ್ವಾರಕಾದ ಮಾಲಕ ವಸಂತ್ ರಾವ್, ಕೃಷ್ಣ ಕನ್ಸಲ್ಟಿಂಗ್ಸ್ ನ ಇಂಜಿನಿಯರ್ ಕೃಷ್ಣ ರಾವ್ ನಾವೂರು, ಕನ್ನಿಕಾ ಜನರಲ್ ಸ್ಟೋರ್ಸ್ ಮಾಲಕ ಗುಡ್ಡಪ್ಪ ಗೌಡ , ಗುರು ಶಾಮಿಯಾನದ ಗುರುದತ್ ನಾಯಕ್ ಸುಳ್ಯ, ಪಾದಂ‌ ಪಾದರಕ್ಷೆ ಮಳಿಗೆಯ ಪಾಲುದಾರ ಚಿದಾನಂದ ವಿದ್ಯಾನಗರ ರವರು ಲಕ್ಕಿ ಕೂಪನ್ ಡ್ರಾ ವನ್ನು ನೆರವೇರಿಸಿದರು.

ಬಂಪರ್ ಬಹುಮಾನ ವಿಜೇತ ಮಧುಸೂದನ ಮತ್ತು ಮೀನಾಕ್ಷಿ ಕುಕ್ಕೆಟ್ಟಿ (ಅಡ್ಕಾರ್) ದಂಪತಿಯ ವರಿಗೆ ಪ್ರಸಿದ್ಧ ಕಂಪೆನಿಯ ಬ್ರ್ಯಾಂಡ್ ಗೇರ್ ಸೈಕಲನ್ನು ವಿತರಿಸಲಾಯಿತು. ಆಕರ್ಷಕ ಬಹುಮಾನ ವಿಜೇತರಾದ ವಸಂತ ಅಮೈ, ದಿವಾಕರ‌ (ಚಾಲಕ), ಲೋಲಾಕ್ಷ ಕನಕಮಜಲು,ಚೇತನ್ ಕೆ.ಆರ್ ಗೂನಡ್ಕ, ಜಗದೀಶ್ ಜಾಲ್ಸೂರು, ವರುಣ್ ಜಯನಗರ, ಶಿವಪ್ರಸಾದ್ ಎಲಿಮಲೆ,ಪ್ರತಿಮಾ ಮಾಣಿಬೆಟ್ಟು ರವರಿಗೆ ಬಹುಮಾನವನ್ನು ವಿತರಿಸಲಾಯಿತು.

ಚಿದಾನಂದ ವಿದ್ಯಾನಗರ ಸ್ವಾಗತಿಸಿದರು. ಇಂಜಿನಿಯರ್ ಸೂರಜ್ ವಂದಿಸಿದರು.ಇಂಜಿನಿಯರ್ ಗಿರೀಶ್ ಪಾಲಡ್ಕ ,ಇಂಜಿನಿಯರ್ ಹರಿಪ್ರಸಾದ್ ಕಿರ್ಲಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here