ಕಾಣಿಯೂರು ಶ್ರೀ ಮಠದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ- ಧಾರ್ಮಿಕ ಸಭೆ

0

  • ಆಧ್ಯಾತ್ಮಿಕ ವಿಚಾರ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಪಾವನ- ಕಾಣಿಯೂರು ಶ್ರೀ

 

ಕಾಣಿಯೂರು: ಧರ್ಮ ಅನ್ನುವ ಶಬ್ಧಕ್ಕೆ ವ್ಯಾಪಕ ಅರ್ಥವಿದೆ. ಪ್ರಪಂಚ ನಿಂತಿರುವುದು ಧರ್ಮದ ಆಧಾರದ ಮೇಲೆ. ಧರ್ಮ, ಸಂಸ್ಕೃತಿ, ಆಧ್ಯಾತ್ಮ ಇಂದಿಗೂ ಅಚಲವಾಗಿ ಉಳಿದಿದೆ. ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡು ಸಮಾಜವನ್ನು ಬೆಳೆಸುವ ಮಹತ್ಕಾರ್ಯದ ಕೆಲಸ ಆಗಬೇಕಾಗಿದೆ. ಧಾರ್ಮಿಕ ಚಿಂತನೆ, ಧಾರ್ಮಿಕ ಸೇವೆ ನಮ್ಮೆಲ್ಲರ ಬದುಕಿಗೆ ಆದರ್ಶವಾಗಿದೆ ಎಂದು ಶ್ರೀ ಜಗದ್ಗುರು ಶ್ರೀಮನ್ವಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಮಾ ೧೭ರಂದು ಶ್ರೀ ಜಗದ್ಗುರು ಶ್ರೀಮನ್ವಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಕಾಣಿಯೂರು ರಾಮತೀರ್ಥ ಮಠದಲ್ಲಿ ನಡೆದ ಶ್ರೀ ಲಕ್ಷ್ಮೀನರಸಿಂಹ ದೇವರ ಮತ್ತು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಮಾತನಾಡಿದರು. ಸಂಸ್ಕಾರ ಭರಿತ ಜೀವನ ಮಾಡಿದಾಗ ನಮಗೆ ನೆಮ್ಮದಿ ಸಿಗುವುದರೊಂದಿಗೆ ಇತರರಿಗೂ ನೆಮ್ಮದಿ ಸಿಗುತ್ತದೆ. ಆದ್ಯಾತ್ಮಿಕ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದ ಶ್ರೀಯವರು ಧರ್ಮದಲ್ಲಿಯೂ ಭಾರಿ ಗೊಂದಲಗಳು ಉಂಟಾಗುತ್ತಿದ್ದು, ಧರ್ಮಗಳು ವಿದ್ಯಾಸಂಸ್ಥೆಗಳಿಗೂ ಕಾಲಿಟ್ಟಿರುವುದು ವಿಷಾಧನೀಯ ವ್ಯಕ್ತಪಡಿಸಿದರು.


ಕಾರ್ಯಕ್ರಮಗಳು: ಶ್ರೀ ಜಗದ್ಗುರು ಶ್ರೀಮನ್ವಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಕಾಣಿಯೂರು ರಾಮತೀರ್ಥ ಮಠದಲ್ಲಿ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಕಾಣಿಯೂರು ರಾಮತೀರ್ಥ ಮಠ ಇವರ ಆದೇಶದಂತೆ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರ ಮತ್ತು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯಿತು. ಮಾ ೧೪ರಂದು ಗೊನೆ ಮೂಹೂರ್ತ ನಡೆದು, ಮಾ೧೬ರಂದು ಹಸಿರು ಕಾಣಿಕೆ ಸಮರ್ಪಿಸಲಾಯಿತು. ಮಾ ೧೭ರಂದು ಬೆಳಿಗ್ಗೆ ನರಸಿಂಹ ಹೋಮ ಸಹಿತ ವಾಯುಸ್ತುತಿ ಹೋಮ, ಪವಮಾನ ಪಾರಾಯಣ, ನವಕ ಕಲಶಾಭಿಷೇಕ, ಕಾಣಿಯೂರು ಮಠದ ಪರಿವಾರ ದೈವ- ದೇವರಿಗೆ ಕಲಶಾಭಿಷೇಕ, ತಂಬಿಲ, ೧೨ ತೆಂಗಿನಕಾಯಿ ಗಣಪತಿ ಹೋಮ ಸಹಿತ ದುರ್ಗಾಹೋಮ, ಆಶ್ಲೇಷಾ ಬಲಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಇವರಿಂದ ಭಜನಾ ಕಾರ್ಯಕ್ರಮ, ಕಾಣಿಯೂರು ಮಠದ ಸಂಸ್ಥಾನ ದೇವರ ಪೂಜೆ ಹಾಗೂ ದುರ್ಗಾಪೂಜೆ, ಮಧ್ಯಾಹ್ನ ಸದಾನಂದ ಆಚಾರ್ಯ ಕಾಣಿಯೂರು ಇವರ ನೇತೃತ್ವದಲ್ಲಿ ಕೊಳ್ತಿಗೆ ಪೆರ್ಲಂಪಾಡಿ ಶ್ರೀ ಮರಾಠಿ ಸೇವಾ ಸಮಾಜ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಆಶೀರ್ವಚನ, ಫಲ ಮಂತ್ರಾಕ್ಷತೆ, ಬಳಿಕ ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ, ರಂಗಪೂಜೆ, ಮಹಾಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಮನರಂಜಿಸಿದ ಗೀತ ಸಾಹಿತ್ಯ ಸಂಭ್ರಮ: ಶ್ರೀ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ, ಶ್ರೀ ದುರ್ಗಾಪರಮೇಶ್ವರಿ ಶ್ರಿ ಉಳ್ಳಾಲ್ತಿ ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ ಅಂಗ್ರಿ ಕನ್ಯಾನ ಇವರಿಂದ ಆಯ್ದ ಕಥಾ ಭಾಗಗಳ ಯಕ್ಷ ನಾಟ್ಯ ವೈಭವ ನಡೆಯಿತು.

ಆಧ್ಯಾತ್ಮಿಕ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ಧರ್ಮದಲ್ಲಿಯೂ ಭಾರಿ ಗೊಂದಲುಗಳು ಉಂಟಾಗುತ್ತಿದ್ದು, ಧರ್ಮಗಳು ವಿದ್ಯಾಸಂಸ್ಥೆಗಳಿಗೂ ಕಾಲಿಟ್ಟಿರುವುದು ವಿಷಾಧನೀಯ.

LEAVE A REPLY

Please enter your comment!
Please enter your name here