ಗುತ್ತಿಗಾರಿನ ಪದವಿ ಪೂರ್ವ ಕಾಲೇಜಿನಲ್ಲಿ ಕೋಟಿಕಂಠ ಗಾಯನ

0

ಗುತ್ತಿಗಾರಿನ ಪದವಿ ಪೂರ್ವ ಕಾಲೇಜಿನಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ಕೋಟಿಕಂಠ ಗಾಯನ “ನನ್ನ ನಾಡು-ನನ್ನ ಹಾಡು” ಶೀರ್ಷಿಕೆಯ ಅಂಗವಾಗಿ ಅ. 28 ರಂದು ನಾಡಗೀತೆ ಯೊಂದಿಗೆ 5 ಕನ್ನಡ ಗೀತೆಗಳ ಸಮೂಹ ಗಾಯನ ನಡೆಯಿತು.

ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಪಿ ಮಹದೇವ್, ಶ್ರೀಮತಿ ನಳಿನಿ, ಶ್ರೀಮತಿ ಸಂಧ್ಯಾ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ತಾಲೂಕು ಅಧ್ಯಕ್ಷರಾದ ಪ್ರಕಾಶ್ ಮೂಡಿತ್ತಾಯ ಇವರುಗಳ ಉಪಸ್ಥಿತರಿದ್ದರು.

ಹಾಗೂ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು , ಸಿಬ್ಬಂದಿಗಳು ಮತ್ತು ನಮ್ಮ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಕೋಟಿಕಂಠ ಗಾಯನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here