ಮರ್ಕಂಜ ಪ್ರೌಢಶಾಲೆಯಲ್ಲಿ‌ ಗಾಂಧಿನಗರ ಹೋಬಳಿ ಮಟ್ಟದ ಕ್ರೀಡಾಕೂಟ

0

 

ಲಕ್ಷ್ಮೀಶ ರೈಯವರಿಗೆ ಸನ್ಮಾನ

ಮರ್ಕಂಜ ಪ್ರೌಢಶಾಲೆಯಲ್ಲಿ‌ ಗಾಂಧಿನಗರ ಹೋಬಳಿ ಮಟ್ಟದ ಕ್ರೀಡಾಕೂಟ


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿ ಸುಳ್ಯ, ಸ.ಹಿ.ಪ್ರಾ.ಶಾಲೆ ಮುಡ್ನೂರು ಮರ್ಕಂಜ ಮತ್ತು ಮಿತ್ತಡ್ಕ ಮರ್ಕಂಜ ಇವುಗಳ ಸಹಭಾಗಿತ್ವ ದಲ್ಲಿ ಗಾಂಧಿನಗರ ಹೋಬಳಿ ಮಟ್ಟದ ಕ್ರೀಡಾಕೂಟವು ಮರ್ಕಂಜ ಪ್ರೌಢಶಾಲೆಯ ವಠಾರದಲ್ಲಿ ಇಂದು (ಅ.29) ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ.ಮಹದೇವ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಂಜ ಗ್ರಾಪಂ.ಅಧ್ಯಕ್ಷೆ ಪವಿತ್ರ ಗುಂಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ರೆಂಜಾಳ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಮರ್ಕಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಎಂ.ಟಿ., ಮಿತ್ತಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಂಧ್ಯಾ ದೋಳ, ಮುಡ್ನೂರು ಮರ್ಕಂಜ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮೀನಾಕ್ಷಿ ಬೊಮ್ಮೆಟ್ಟಿ, ಮಿತ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ, ತಾಲೂಕು ಕ್ರೀಡಾ ಸಂಘದ ಅಧ್ಯಕ್ಷೆ ವನಿತಾ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಖಜಾಂಜಿ ಶ್ರೀಮತಿ ಶೀಲಾವತಿ, ಶಿಕ್ಷಣ ಸಂಯೋಜಕ ಚಂದ್ರಶೇಖರ, ಅರಂತೋಡು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಮಹೇಶ್, ಮರ್ಕಂಜ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ಬಾಣೂರು ಉಪಸ್ಥಿತರಿದ್ದರು. ಮುಡ್ನೂರು ಮರ್ಕಂಜ ಶಾಲಾ ಮುಖ್ಯೋಪಾಧ್ಯಾಯ ದೇವರಾಜ ಸ್ವಾಗತಿಸಿ, ಮುಡ್ನೂರು ಮರ್ಕಂಜ ಶಾಲೆಯ ಶಿಕ್ಷಕ ಬೆಳ್ಯಪ್ಪ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮ ದಲ್ಲಿ ಹೋಬ಼ಳಿ ಮಟ್ಟದ ಶಿಕ್ಷಕರು, ವಿದ್ಯಾರ್ಥಿ ಗಳು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here