ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ರಾಮಚಂದ್ರ

0

  • ಪುತ್ತೂರಿನ ನರಸಿಂಹ ಕಾರ್ಕಳದ ನೂತನ ವಿಭಾಗಕ್ಕೆ ವರ್ಗಾವಣೆ

ಪುತ್ತೂರು: ಮೆಸ್ಕಾಂ ಪುತ್ತೂರು ವಿಭಾಗದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ನರಸಿಂಹರವರು ಕಾರ್ಕಳದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ವಿಭಾಗಕ್ಕೆ ವರ್ಗಾವಣೆಗೊಂಡಿರುತ್ತಾರೆ. ಬಂಟ್ವಾಳದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ರಾಮಚಂದ್ರರವರು ಪುತ್ತೂರು ವಿಭಾಗಕ್ಕೆ ವರ್ಗಾವಣೆಗೊಂಡಿರುತ್ತಾರೆ.


ಸುಳ್ಯ ತಾಲೂಕಿನ ಜಾಲ್ಸೂರು ಮಾಪಲಡ್ಕ ನಿವಾಸಿಯಾಗಿರುವ ರಾಮಚಂದ್ರರವರು, ಹಾಸನ ಜಿಲ್ಲೆಯ ಅರಕಲಗೂಡು, ಮೂಡಬಿದರೆ 400 ಕೆವಿ. ಲೈನ್, ಬೆಳ್ತಂಗಡಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ 2016ರಲ್ಲಿ ಪುತ್ತೂರು ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. 2018ರಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಮುಂಭಡ್ತಿ ಪಡೆದು ಬಂಟ್ವಾಳ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಬಂಟ್ವಾಳದಲ್ಲಿ ಮೂರೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಬಳಿಕ ಮತ್ತೆ ಪುತ್ತೂರಿಗೆ ವರ್ಗಾವಣೆಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here