ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಮಾಲಕನಿಗೆ ದಂಡ : ಸಂಪಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ‌ ಚರ್ಚೆ

0

 

ಸಂಪಾಜೆ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಬಾಭವನದಲ್ಲಿ ನಡೆಯಿತು.

 

ಮಾಸಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ವಾಚಿಸಿದರು.
ಸಾರ್ವಜನಿಕ ಅರ್ಜಿ ಹಾಗೂ ಸರಕಾರದ ಸುತ್ತೋಲೆಯನ್ನು ಸಿಬ್ಬಂದಿ ಗೋಪಮ್ಮ ವಾಚಿಸಿದರು.

ಸರಕಾರದ ಈಗಿನ ಸುತ್ತೋಲೆಯಂತೆ ಕಟ್ಟಡ ಪರವಾನಿಗೆ ಬಗ್ಗೆ ಚರ್ಚಿಸಲಾಯಿತು. ಯಾವುದೇ ಕಟ್ಟಡ ಕಟ್ಟುವಾಗ ಗ್ರಾಮ ಪಂಚಾಯತ್ ಚರಂಡಿ ಮುಚ್ಚಿದರೆ ತೆರವು ಗೊಳಿಸಿ ಸಂಬಂಧಪಟ್ಟ ಕಟ್ಟಡ ವಾರಿಸುದಾರರೇ ಪೈಪ್ ಮೋರಿ ಅಳವಡಿಸಿ ನೀರು ಹರಿಯಲು ಅವಕಾಶ ಮಾಡಿಕೊಡುವುದು. ಹೊಸದಾಗಿ ಅನುಮತಿ ಕೊಡುವಾಗ ಚರಂಡಿ ನಿರ್ಮಿಸಿದ ನಂತರ ಅನುಮತಿ ಕರೆಂಟ್ ಬಗ್ಗೆ ಪ್ರಮಾಣ ಪತ್ರ ನೀಡುವುದು. ಪ್ರತಿಯೊಂದು ವಾಣಿಜ್ಯ ಕಟ್ಟಡದಲ್ಲಿ ಟಾಯ್ಲೆಟ್ ಕಡ್ಡಾಯ ಇರಬೇಕೆಂದು ಈ ಬಗ್ಗೆ ನಿರ್ಣಯ ಮಾಡಲಾಯಿತು. ಸಾರ್ವಜನಿಕರ ಮನೆಗಳಲ್ಲಿ ಇರುವ ಸಾಕು ಪ್ರಾಣಿಗಳ ಮಾಹಿತಿಯನ್ನು ಪಡೆಯುವುದು ಹಾಗೂ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುವವರನ್ನು ಗುರುತಿಸಿ ನೋಟೀಸ್ ಕೊಟ್ಟು ದಂಡನೆ ವಿಧಿಸಲು ಅಭಿವೃದ್ಧಿ ಅಧಿಕಾರಿಯವರಿಗೆ ಅಧಿಕಾರ ನೀಡಲಾಯಿತು. ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಕ್ರಿಯಾಯೋಜನೆ ವಿಳಂಬದ ಬಗ್ಗೆ ಚರ್ಚೆ ನಡೆಯಿತು. ಮಕ್ಕಳ ದಿನಾಚರಣೆಯ ಕಾರ್ಯಕ್ರಮ. ಶಾಲಾ ಮಕ್ಕಳ ಹಬ್ಬ ರೀತಿಯಲ್ಲಿ ಗ್ರಾಮದ 7 ಪ್ರಾಥಮಿಕ ಹಾಗೂ 4. ಪ್ರೌಢಶಾಲೆಗಳ ಸಾಂಸ್ಕೃತಿಕ ಹಬ್ಬ ಮಕ್ಕಳ ಸ್ಪರ್ಧಾ ಕಾರ್ಯಕ್ರಮ ನವಂಬರ್ 14 ತೆಕ್ಕಿಲ್ ಶಾಲೆಯಲ್ಲಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಪ್ರಥಮ /ದ್ವಿತೀಯ ಹಾಗೂ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ಹಾಗೂ ಶಾಲೆಗಳಿಗೆ ಸ್ಮರಣಿಕೆ ನೀಡಲು ತೀರ್ಮಾನಿಸಲಾಯಿತು. ಮನೆ ಪಾಸಾಗಿ ನಿರ್ಮಾಣ ಮಾಡದೇ ಬಾಕಿ ಇರುವ ಮನೆಗಳ ಬಗ್ಗೆ ಚರ್ಚೆ ನಡೆಯಿತು ಕೂಡಲೇ ಕಾಮಗಾರಿ ಮಾಡುವಂತೆ ಪಲಾನುಭವಿಗಳಿಗೆ ನೋಟೀಸ್ ಕೊಡಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಮೀಟರ್ ಅಳವಡಿಸಲು ಈ ಬಗ್ಗೆ ಕರ ವಸೂಲಿ ಮಾಡಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಕಲೆಕ್ಷನ್ ಮೆಷಿನ್ ಮೂಲಕ ಮಾಡಲು ತೀರ್ಮಾನಿಸಲಾಯಿತು. ಸ್ವಚ್ಛತೆ ಇಲ್ಲದ ಕಟ್ಟಡಗಳಿಗೆ ನೋಟೀಸ್ ನೀಡಿ ದಂಡನೆ ವಸೂಲಿ ಮಾಡಲು ಅಭಿವೃದ್ಧಿ ಅಧಿಕಾರಿಯವರಿಗೆ ಅಧಿಕಾರ ನೀಡಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಲು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತ್ ವತಿಯಿಂದ ಬ್ಯಾನರ್ ಪರವಾನಿಗೆ ಉಚಿತ. ಪಂಚಾಯತ್ ವತಿಯಿಂದ 1. ಬ್ಯಾನರ್ ಹಾಕುವುದು. ಕಸ ಸಾಗಾಟಕ್ಕೆ. ವಾಹನ. ಹಾಗೂ ಕಸ ಸಾಗಾಟ ವಾಹನದಲ್ಲಿ ಗ್ರಾಮದಲ್ಲಿ ಪ್ರಚಾರ ಮಾಡಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ವೆವಸ್ಥೆ ದೂರು ದಾಖಲೆ ಹಾಗೂ ಸಂಪರ್ಕದ ವೆವಸ್ತೆಯನ್ನು ಕಂಪ್ಯೂಟರಿಕರಣ ಮಾಡುವುದು. ನೀರು ಬೇಕಾದವರಿಗೆ ಮೀಟರ್ ಅಳವಡಿಸಿ ತೆರಿಗೆ ವಿಧಿಸಿ ನೀರು ಒದಗಿಸಲು ತೀರ್ಮಾನಿಸಲಾಯಿತು. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಮಾಡುವುದು. ಈ ಬಗ್ಗೆ ಚರ್ಚಿಸಲಾಯಿತು. ಬೀದಿ ದೀಪಗಳ ದುರಸ್ಥಿ ಮಾಡುವುದು. ಬೀದಿ ನಾಯಿ ಹಾವಳಿ ಬಗ್ಗೆ ಚರ್ಚೆ ನಡೆಯಿತು. ಸಾರ್ವಜನಿಕ ಅರ್ಜಿಗಳ ಶೀಘ್ರದಲ್ಲಿ ವಿಲೇವಾರಿ ಗ್ರಾಮದಲ್ಲಿ ಬೇಕಾ ಬಿಟ್ಟಿ ಕೇಬಲ್ ಅಳವಡಿಕೆ ಮಾಡಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚೆ ನಡೆಯಿತು. ಅನುಮತಿ ಪಡೆಯದೇ ಅಳವಡಿಸಿದ ಕೇಬಲ್ ತೆರವು ಮಾಡಲು ಅಭಿವೃದ್ಧಿ ಅದಿಕಾರಿಯವರಿಗೆ ಅಧಿಕಾರ ನೀಡಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಅನುಪಮಾ, ಸುಶೀಲ, ರಜನಿ ಶರತ್, ವಿಜಯ ಕುಮಾರ್ ಆಲಡ್ಕ, ವಿಮಲಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here