ನೆಲ್ಯಾಡಿ: ಜೆಸಿಬಿ-ರಿಕ್ಷಾ ಡಿಕ್ಕಿ- ರಿಕ್ಷಾ ಚಾಲಕನಿಗೆ ಗಾಯ

0

 

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ನೆಲ್ಯಾಡಿ ಪೇಟೆಯಲ್ಲಿ ಜೆಸಿಬಿ ಹಾಗೂ ರಿಕ್ಷಾ ಮಧ್ಯೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಮಾ.18ರಂದು ನಡೆದಿದೆ. ರಿಕ್ಷಾ ಚಾಲಕ, ನೆಲ್ಯಾಡಿ ಕಟ್ಟೆಮಜಲು ನಿವಾಸಿ ಜಯರಾಮ ಗಾಯಗೊಂಡವರಾಗಿದ್ದಾರೆ. ಜೆಸಿಬಿ ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು ಚಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಜಯರಾಮರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರೋರ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here