ಜ್ಯೋತಿಷಿ ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ಹಾಡಿರುವ ಅಪ್ಪು ಧ್ರುವ ನಕ್ಷತ್ರ ಮ್ಯೂಸಿಕ್ ಆಲ್ಬಮ್ ಬಿಡುಗಡೆ

0

ಪವರ್ ಸ್ಟಾರ್ ದಿ ||ಪುನೀತ್ ರಾಜ್ ಕುಮಾರ್ ಅವರ ಪ್ರಪ್ರಥಮ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಸುಳ್ಯದ ಜ್ಯೋತಿಷಿ , ಸಾಹಿತಿ ಮತ್ತು ಚಿತ್ರ ನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ಅವರು ಸಾಹಿತ್ಯ ರಚಿಸಿ ಹಾಡಿರುವ ಅಪ್ಪು ಧ್ರುವ ನಕ್ಷತ್ರ ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮವು ಸುಳ್ಯದ ಸಂತೋಷ್ ಟಾಕೀಸ್ ಲ್ಲಿ ನೆರವೇರಿತು. ಸುಳ್ಯದ ಭಾವನಾ ಮೀಡಿಯಾ ಅರ್ಪಿಸಿದ ಮ್ಯೂಸಿಕ್ ಆಲ್ಬಮ್ ನ್ನು ಬಿಡುಗಡೆ ಮಾಡಿದ ಸುಳ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀ ದಿಲೀಪ್ ರವರು ಪುನೀತ್ ರಾಜ್ ಕುಮಾರ್ ಅವರು ನಡೆದು ಬಂದ ದಾರಿ , ಅವರ ಉತ್ತಮ ಗುಣಗಳು , ಅವರ ಚಿತ್ರಗಳ ಸಂದೇಶಗಳನ್ನು ತಿಳಿಸಿ ಶುಭ ಹಾರೈಸಿದರು . ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕರಾದ ಶ್ರೀ ಯಶ್ವಿತ್ ಕಾಳಮ್ಮನೆ ಯವರು ಸುಳ್ಯದಲ್ಲಿಯೂ ಕೂಡ ಪುನೀತ್ ಸ್ಮರಣೆ ಕಾರ್ಯಕ್ರಮ ನಡೆದ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದರು . ಸರ್ವರು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಿದರು . ಸಾಹಿತಿ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಅಪ್ಪು ಅವರಿಗೆ ನುಡಿನಮನ ಸಲ್ಲಿಸಿ ಎಲ್ಲರನ್ನೂ ಸ್ವಾಗತಿಸಿದರು . ಈ ಕಾರ್ಯಕ್ರಮದಲ್ಲಿ ಸಂತೋಷ್ ಟಾಕೀಸ್ ನ ಮ್ಯಾನೇಜರ್ ಆದ ಸುರೇಶ್ , ಫಿಲಂ ಆಪರೇಟರ್ ಹಾಗೂ ಕಲ್ಕುಡ ದೈವದ ಅರ್ಚಕರಾದ ತಿಮ್ಮಪ್ಪಗೌಡ ನಾವೂರು , ಸುಳ್ಯದ ವಿಷ್ಣುವರ್ಧನ್ ಸಂಘದ ಅಧ್ಯಕ್ಪ ಹರಿಶ್ಚಂದ್ರ ಪಂಡಿತ್ , ಫ್ಯೂಶನ್ ಡ್ಯಾನ್ಸ್ ಕ್ಲಬ್ ನ ಸಂಚಾಲಕರಾದ ವಸಂತ್ ಕಾರ್ಯಾತೋಡಿ , ಸಪ್ತಸ್ವರ ಸಂಗೀತ ಬಳಗದ ಸಂಚಾಲಕ ಅರುಣ್ ಜಾಧವ್ , ವಕೀಲರಾದ ಬಾಲಚಂದ್ರ , ಗಾಯಕ ರವಿ ಪಾಂಬಾರ್ ಇನ್ನಿತರರು ಉಪಸ್ಥಿತರಿದ್ದರು . ಪುನೀತ್ ಅಭಿನಯಿಸಿದ ಎಲ್ಲಾ ಚಿತ್ರಗಳ ಹೆಸರುಗಳನ್ನೂ ಸೇರಿಸಿ ಬರೆದ ಈ ಮ್ಯೂಸಿಕ್ ಆಲ್ಬಮ್ ನ್ನು ಕಬಕದ ಶ್ರೀರಾಜ್ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಧ್ವನಿಮುದ್ರಣ ಮಾಡಲಾಗಿದೆ . ಖ್ಯಾತ ಗಾಯಕ ಮಿಥುನ್ ರಾಜ್ ವಿದ್ಯಾಪುರ ರವರು ಎಡಿಟಿಂಗ್ ಮಾಡಿದ್ದಾರೆ . ಭೀಮರಾವ್ ವಾಷ್ಠರ್ ಯೂಟ್ಯೂಬಲ್ಲಿ ಈ ಹಾಡು ಸಿಗುತ್ತದೆ . ಇದರ ಶೀರ್ಷಿಕೆಯನ್ನು ಚಂದನಾ ವಾಷ್ಠರ್ ನೀಡಿರುತ್ತಾರೆ . ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೂಡಾ ಉಪಸ್ಥಿರಿದ್ದರು .

LEAVE A REPLY

Please enter your comment!
Please enter your name here