ಮಿತ್ರವ್ರಂದ ವಾಲಿಬಾಲ್ ಅಕಾಡೆಮಿಯಿಂದ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ಮಿತ್ರವ್ರಂದ ವಾಲಿಬಾಲ್ ಆಕಡೆಮಿ ಇದರ ವತಿಯಿಂದ ಪುತ್ತೂರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಅವರಿಗೆ ಅಭಿನಂದನಾ ಸಮಾರಂಭವು ಮಾ. 16 ರಂದು ದರ್ಬೆ ಡಾ.ಪ್ರದೀಪ್‌ಕುಮಾರ್ ಅವರ ಆಸ್ಪತೆ ಆವರಣದಲ್ಲಿ ನಡೆಯಿತು.

ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಧ್ಯಕ್ಷರಾದ ಪಿ ವಿ ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಕಾರ್ಯದರ್ಶಿ ಪ್ರಸನ್ನಕುಮಾರ್, ಬಾಲಚಂದ್ರ ಅವರ ಬಗ್ಗೆ ಗುಣಗಾನ ಮಾಡಿದರು. ಅಕಾಡೆಮಿ ಅಧ್ಯಕ್ಷರಾದ ಪಿ ವಿ ಕೃಷ್ಣನ್ ರವರು ಶಾಲುಹೊದಿಸಿ ಗೌರವಿಸಿದರು.ಡಾ. ಪ್ರದೀಪ್ ಕುಮಾರ್ ರವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಅವರ ಸ್ಪದಂನಾ ಮನೋಭಾವದ ಬಗ್ಗೆ ವಿವರಿಸಿದರು.ಪಿ ವಿ ನಾರಾಯಣ ರವರು ಹೂ ಗುಚ್ಚ ನೀಡಿ ಅಭಿನಂದಿಸಿದರು.ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ರಾಮಚಂದ್ರ, ಪಿ ವಿ ರಾಘವನ್, ಸಿರಾಜುದ್ದೀನ್ ಕೆ ಪಿ, ಡಾ. ವಿಖ್ಯಾತ್‌ನಾರಾಯಣ, ಹಮೀದ್ ಸಾಜ, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಚಂದ್ರರವರು ಮಾತನಾಡಿ ಹೇಳಿ ಕೃತಜ್ಞತೆ ಸಲ್ಲಿಸಿದರು. ಶಿವರಂಜನ್ ದೇರ್ಲ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here