ಅಂತರ್ ಶಾಲಾ ವಿಜ್ಞಾನ ಮತ್ತು ಕಲಾಸ್ಪರ್ಧೆ ಜ್ಞಾನ ಗಂಗಾ ಸ್ಕೂಲ್ ಗೆ  ಸಮಗ್ರ ಪ್ರಶಸ್ತಿ

0

 

ಎಕ್ಸೆಲ್ ಪಿ.ಯು.ಕಾಲೇಜು ಗುರುವಾಯನಕೆರೆಯಲ್ಲಿ “ಶೋಧ 2022 “ವಿಜ್ಞಾನ ಮತ್ತು ಕಲಾ ಮೇಳ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಅಂತರ್ ಶಾಲಾ ಸ್ಪರ್ಧೆಗಳನ್ನು ಅ. 29 ರಂದು ಆಯೋಜಿಸಲಾಗಿತ್ತು. ಇದರಲ್ಲಿ ಜ್ಞಾನಗಂಗಾ ವಿದ್ಯಾ ಸಂಸ್ಥೆಯ 12 ವಿದ್ಯಾರ್ಥಿಗಳು 12 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸೈನ್ಸ್ ಮಾಡೆಲ್ ಮೇಕಿಂಗ್ ಸಂಚಯ್ ರೈ ( IX)ಹಾಗೂ ಊರ್ವಿಮಾನ್ಯ (IX)ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಆಶರ್ ಪಿಂಟೋ (X) ದ್ವಿತೀಯ ಸ್ಥಾನವನ್ನು ಹಾಗೂ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಶಾರ್ವರಿ ( IX) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ತ್ರಯೀ ಭಟ್ ( VIII)ಹಾಗೂ ಶ್ರೇಯಾನ್( X) ತೃತೀಯ ಸ್ಥಾನ, ಪೆನ್ಸಿಲ್ ಸ್ಕೆಚ್ ಸ್ಪರ್ಧೆಯಲ್ಲಿ ತನ್ವಿ ಎಂಪಿ (X)ಮೂರನೇ ಸ್ಥಾನವನ್ನು ಪಡೆದಿರುತ್ತಾಳೆ. ಒಟ್ಟಾಗಿ ಶಾಲೆಯು ಮೂರನೇ ಸ್ಥಾನವನ್ನು ಬಗಲಿಗೇರಿಸಿಕೊಂಡು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here