ಅಪಘಾತ ಗಾಯಾಳುವಿನ ಪ್ರಾಣ ರಕ್ಷಿಸಿದ ಕಾರ್ಯಕರ್ತನ ಸನ್ಮಾನಿಸಿದ ಸಿದ್ದರಾಮಯ್ಯ

0

ಪುತ್ತೂರು: ಕುಟುಂಬವೊದು ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದು ಕಾರಿನಲ್ಲಿದ್ದವರು ಗಾಯಗೊಂಡು , ಬಾಲಕಿಯೋರ್ವರಳು ಗಂಭೀರಗಾಯಗೊAಡಿದ್ದು , ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಆಕೆಯ ಪ್ರಾಣ ರಕ್ಷಿಸಿದ ಕುಂಬ್ರದ ಕಾಂಗ್ರೆಸ್ ಕಾರ್ಯಕರ್ತ ಉದ್ಯಮಿ ನಾಸಿರುದ್ದೀನ್ ಎಂಬವರನ್ನು ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದಾರೆ.

ಪುತ್ತೂರಿನ ಚೇತನಾ ಸ್ಟುಡಿಯೋ ಮಾಲಕ ಅಶೋಕ್ ಕುಂಬ್ಳೆಯವರ ಕುಟುಂಬ ತೆರಳುತ್ತಿದ್ದ ಕಾರು ಸುಳ್ಯ ಸಮೀಪದ ಆನೆಗುಂಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಅಶೋಕ್ ಕುಂಬ್ಳೆಯವರ ಪತ್ನಿ ಸಹಿತ ಹಲವು ಗಾಯಗೊಂಡಿದ್ದು ಅವರ ಪುತ್ರಿ ಆಶ್ರಯ ರವರಿಗೆ ಗಂಭೀರ ಗಾಯಗೊಂಡಿತ್ತು. ಜೀವನ್ಮರಣ ಹೋರಾಟದಲ್ಲಿದ್ದ ಬಾಲಕಿ ಆಶ್ರಯ ಳನ್ನು ನಾಸಿರುದ್ದೀನ್ ತಕ್ಷಣ ತನ್ನ ಕಾರಿನಲ್ಲಿ ಸ್ನೇಹಿತ ಸಲಾಂ ಅವರ ಜೊತೆ ಆಸ್ಪತ್ರೆಗೆ ಸಾಗಿಸಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಕಾರಣ ಆಕೆ ಬದುಕಿ ಉಳಿಯುವಂತಾಗಿತ್ತು. ಘಟನೆ ನಡೆದು ಒಂದು ವರ್ಷದ ಬಳಿಕ ಬಾಲಕಿ ಮನೆಯವರು ನಾಸಿರ್ ಅವರ ಮನೆಗೆ ಬಂದು ಪ್ರಾಣ ರಕ್ಷಿಸಿದ್ದಕ್ಕೆ ಸನ್ಮಾನವನ್ನು ಮಾಡಿದ್ದರು.

ಉತ್ತಮ ಕಾರ್ಯ ನೆರವೇರಿಸಿದ ಒಳಮೊಗ್ರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನಾಸಿರುದ್ದೀನ್ ಅವರನ್ನು ಸನ್ಮಾನಿಸಲು ಒಳಮೊಗ್ರು ವಲಯ ಕಾಂಗ್ರೆಸ್ ಸಮಿತಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಡಿತ್ತು. ಪುತ್ತೂರಿನಲ್ಲಿ ಮಾ. ೧೯ ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯವರು ನಾಸಿರ್ ಅವರಿಗೆ ಫಲಪುಷ್ಪ, ಶಾಲು ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ತನ್ನ ಉತ್ತಮ ಸೇವೆಯ ಮನೋಭಾವನ್ನು ಇನ್ನೂ ಮುಂದುವರೆಸಿ ಎಲ್ಲರಿಗೂ ಮಾದರಿಯಾಗಿ ಎಂದು ಸಿದ್ದರಾಮಯ್ಯ ಅವರು ಆಶೀರ್ವದಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ , ಮಾಜಿ ಸಚಿವರುಗಳಾದ ವಿನಯಕುಮಾರ್ ಸೊರಕೆ, ಬಿ, ರಮಾನಾಥ ರೈ, ಐವನ್ ಡಿಸೋಜಾ , ಒಳಮೊಗ್ರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ, ಪುತ್ತೂರು ಬ್ಲಾಕ್ ಅಲ್ಪಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here