ಸಾರ್ವಜನಿಕರಿಗಾಗಿ ರೋಟರಿಯಿಂದ ಒಂದಲ್ಲಾ ಒಂದು ಶಿಬಿರ

0

  • ವಿಶ್ವ ಬಾಯಿಯ ಆರೋಗ್ಯ ದಿನ, ಉಚಿತ ಕೃತಕ ದಂತಪಕ್ತಿ ಜೋಡಣಾ ಶಿಬಿರದಲ್ಲಿ ಮಧು ನರಿಯೂರು

ಪುತ್ತೂರು: ರೋಟರಿ ಕ್ಲಬ್‌ನಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಒಂದಲ್ಲಾ ಒಂದು ರೀತಿಯ ಶಿಬಿರ ನಡೆಯುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಮಧು ನರಿಯೂರು ಅವರು ಹೇಳಿದರು.

 

ರೋಟರಿ ಕ್ಲಬ್ ಪುತ್ತೂರು, ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಸರಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ವಿಶ್ವ ಬಾಯಿಯ ಆರೋಗ್ಯ ದಿನ ಮತ್ತು ಉಚಿತ ಕೃತಕ ದಂತಪಂಕ್ತಿಯ ಜೋಡಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಕ್ಲಬ್ ಈಗಾಗಲೇ ಎರಡು ಸಿಗ್ನೇಚರ್ ಪ್ರೋಜೆಕ್ಟ್ ಮಾಡಿದೆ. ಬ್ಲಡ್ ಮೂಲಕ ಟಿ.ಬಿ ಮತ್ತು ತಲೇಸ್ಮೀಯ ರೋಗಿಗಳಿಗೆ ಉಚಿತ ರಕ್ತ, ಹೆರಿಗೆ ಸಂದರ್ಭದಲ್ಲಿ ರಕ್ತ ನೀಡುವ ಕಾರ್ಯಕ್ರಮ ನಡೆಸುತ್ತಿದೆ. ಡಯಾಲಿಸೀಸ್ ಮೂಲಕ ಬಡವರಿಗೆ ರಿಯಾಯಿತಿ ದರ ನೀಡಿದೆ. ಮುಂದಿನ ವರ್ಷ ಕಣ್ಣಿನ ಆಸ್ಪತ್ರೆ ಸಾಧ್ಯತೆ ಇದೆ. ಹಾಗೆ ಮುಂದೆ ಒಟ್ಟು ೪ ಸಿಗ್ನೇಚರ್ ಪ್ರೋಜೆಕ್ಟ್ ಕೈಗೊಳ್ಳುವ ಕಾರ್ಯಕ್ರಮ ರೋಟರಿಯಿಂದ ನಡೆಯಲಿದೆ ಎಂದರು.

ಸಂಘದಿಂದ ಸಮಾಜ ಸೇವೆಗೆ ಅದ್ಯತೆ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಮಾತನಾಡಿ ಸಂಘ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಸಂಘದ ಮೂಲಕ ಸಮಾಜ ಸೇವೆ ಮಾಡಲಾಗುತ್ತಿದೆ ಎಂದರು. ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ ಕೃತಕ ದಂತಪಂಕ್ತಿ ವಿಭಾಗದ ಮುಖ್ಯಸ್ಥ ಡಾ. ಚೇತನ್ ಹೆಗ್ಡೆಯವರು ಶಿಬಿರವನ್ನು ಉದ್ಘಾಟಿಸಿದರು.

ಆರ್ಥಿಕ ನೆರವು:
ಇತ್ತೀಚೆಗೆ ಬೆನ್ನುಮೂಲೆ ಮುರಿತಕ್ಕೊಳಗಾದ ನರಿಮೊಗರಿನ ಹರಿಶ್ಚಂದ್ರ ಅವರ ಚಿಕಿತ್ಸೆಗಾಗಿ ರೂ.೧೦ಸಾವಿರವನ್ನು ಅವರ ಸಂಬಂಧಿಕರ ಮೂಲಕ ರೋಟರಿ ಕ್ಲಬ್ ವತಿಯಿಂದ ನೀಡಲಾಯಿತು. ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ರೋಟರಿ ಕ್ಲಬ್ ಸಮುದಾಯ ವಿಭಾಗದ ನಿರ್ದೇಶಕ ಡಾ. ಜಯದೀಪ್, ದಂತ ವೈದ್ಯಕೀಯ ಸಂಘದ ಡಾ. ಅಮೃತ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ. ದತ್ತಾತ್ರೆಯ ರಾವ್ ಮತ್ತು ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here