ಕುಲಾಲ ಸಮಾಜ ಸೇವಾ ಸಂಘದಿಂದ ಸಾಮೂಹಿಕ ಸತ್ಯನಾರಾಯಣ, ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ

0

ಪುತ್ತೂರು; ಕುಲಾಲ ಸಮಾಜ ಸೇವಾ ಸಂಘದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾಜ್ಯಮಟ್ಟದ ಕಥೆ, ಕವನ, ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯು ಮಾ.20ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಘದ ಗೌರವಾಧ್ಯಕ್ಷ ಬಿ.ಎಸ್ ಕುಲಾಲ್ ಮಾತನಾಡಿ, ಕುಂಬಾರ ಸಮಾಜದಿಂದ ನಾಗರಿಕತೆ ಪ್ರಾರಂಭವಾಗಿದೆ. ಬೇಯಿಸಿ ತಿನ್ನಲು ಪಾತ್ರ ಮಾಡಿಕೊಟ್ಟು ಬೆಳೆದ ಅತೀ ಹೆಚ್ಚು ಜನರಿರುವ ಜನಾಂಗವಾಗಿದೆ. ಯಾವುದೋ ಕೊರತೆಯಿಂದ ನಮ್ಮ ಸಮಾಜವು ಹಿಂದುಳಿದೆ. ಬ್ರಾಹ್ಮಣರಿಗೆ ಹತ್ತಿರವಾದ ಜನಾಂಗ. ವಿದ್ಯಾವಂತರಾದರೂ ಉನ್ನತ ಹುದ್ದೆಗಳನ್ನು ಪಡೆದರೂ ಸಮಾಜ ಹಿಂದುಳಿದಿದೆ. ಸಮಾಜವು ಹಿಂದುಳಿಯಲು ಕಾರಣವೇನು ಎಂಬುದು ತಿಳಿದಿಲ್ಲ ಎಂದ ಅವರು ಸಮಾಜ ಬಾಂಧವೆರೆಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಬಲಪಡಿಸಬೇಕು. ಪರಸ್ಪರ ಪ್ರೀತಿ, ಬಾಂಧವ್ಯತೆಯಿಂದ ಸಂಘಟಿತರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಚಿದಂಬರ ಬೈಕಂಪಾಡಿ ಮಾತನಾಡಿ, ಕುಲಾಲ ಸಮುದಾಯದಲ್ಲಿ‌ ಕವಿ,‌ಸಾಹಿತಿ, ನೃತ್ಯ, ನಾಟಕ, ಪತ್ರಕರ್ತರು,‌ಲೇಖಕರು ಸಾಕಷ್ಟು ಮಂದಿ‌ ಇದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ಅರುವತ್ತಕ್ಕೂ ಅಧಿಕ ಮಂದಿ ಪತ್ರಕರ್ತರು ಕುಲಾಲ ಸಮಾಜದಲ್ಲಿದ್ದಾರೆ. ಎಲ್ಲರನ್ನು ಗುರುತಿಸುವ ಕಾರ್ಯವು ಸಂಘದ ಮುಖಾಂತರ ನಡೆಯಬೇಕು. ಜೊತೆಗೆ ಸಂಘದ ಮುಖಾಂತರ ಯುವ ಸಾಹಿತಿ,‌ಕವಿ, ಬರಹಗಾರರಿಗೆ ತರಬೇತಿ ನೀಡುವ ಕಾರ್ಯವಾಗಬೇಕು ಎಂದರು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಾವು ಸಮಾಜದ ಅವಿಭಾಜ್ಯ ಅಂಗ ಎನ್ನುವುದನ್ನು ಮರೆಯಬಾರದು. ಮೇಲು,‌ಕೀಳು ಎಂಬ ಭಾವನೆ ಬಿಟ್ಟು ತೊಡಗಿಸಿಕೊಳ್ಳಬೇಕು. ಯುವಕರ ಸಮಾಜದಲ್ಲಿ ಮುಂದೆ ಬಂದು ಇಂತಹ ಕಾರ್ಯಮಾಡಬೇಕು ಎಂದರು.

 


ವಿದ್ಯಾರ್ಥಿ ವೇತನ ವಿತರಣೆ ಮಾಡಿದ ಆನಡ್ಕ ಸರಕಾರಿ ಹಿ.ಪ್ರಾ ಶಾಲಾ ಮುಖ್ಯಗುರು ಶುಭಲತಾ ಹಾರಾಡಿ ಮಾತನಾಡಿ, ಗುರು ತೃಪ್ತನಾದರೆ ದೇವರು ತೃಪ್ತರಾದಂತೆ. ಗುರುಗಳನ್ನು ಸನ್ಮಾನಿಸುವ ಮೂಲಕ ಸಂಘದ ಮುಖಾಂತರ ಅಂತಹ ಮಹಾನ್ ಕೆಲಸವಾಗಿದೆ ಎಂದರು. ನಾನೊಬ್ಬ ಕುಲಾಲ ಎಂದು ಹೇಳಲು ಹೆಮ್ಮೆ ಪಡಬೇಕು. ಪೋಷಕರು ಪರೀಕ್ಷೆ,‌ ಅಂಕಗಳ‌ ಹಿಂದೆ ಹೋಗುವುದನ್ನು ನಿಲ್ಲಿಸಬೇಕು. ಮಕ್ಕಳ ಮೇಲೆ‌ ಕನಸುಗಳಿರಬೇಕು. ಆದರೆ ಒತ್ತಡದ ಹೇರಬಾರದು. ಸಂಘದ ಮುಖಾಂತರ ಶಿಕ್ಷಣದ ಜೊತೆಗೆ ಇತರ‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಎಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುವು ಹಾಗೂ ಬಡವರಿಗೆ ಆರ್ಥಿಕ ಸಹಕಾರ ನೀಡಬೇಕು ಎಂದರು.

 

ಮುಖ್ಯ ಅತಿಥಿಗಳಾಗಿದ್ದ ವೀರಮಂಗಲ ಸರಕಾರಿ ಹಿ.ಪ್ರಾ ಶಾಲಾ ಪ್ರಭಾರ ಮುಖ್ಯಗುರು ಹರಿಣಾಕ್ಷಿ ಸೂತ್ರಬೆಟ್ಟು ಮಾತನಾಡಿ, ನಾನು ನನ್ನದು ಎಂಬ ಜಂಜಾಟದ ಜೀವದಿಂದ ಹೊರಬಂದು ನಾವು ನಮ್ಮದು ಎಂಬ ಭಾವನೆ ನಮ್ಮಲ್ಲಿರಬೇಕು. ಸಮುದಾಯದ ಸಂಘಟನೆಗಳಲ್ಲಿ‌ ತೊಡಗಿಸಿಕೊಂಡು ಇತರರಿಗೂ ಮಾದರಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿ, ಕಲೆ, ಸಾಹಿತ್ಯ ಕ್ಷೇತ್ರಗಳು ನಮ್ಮ ಮನಸ್ಸಿಗೆ ಋಷಿ ನೀಡುವ ಕ್ಷೇತ್ರಗಳಾಗಿದೆ. ಅದು ನಮ್ಮ ಮನಸ್ಸಿನ ಒತ್ತಡ ನಿವಾರಿಸುತ್ತದೆ. ಇದಕ್ಕಾಗಿ ಸಮಾಜ ಬಾಂಧವರಿಗೆ ಪ್ರೇರಣೆ ಹಾಗೂ ಸಹಕಾರ ನೀಡುವ ಉದ್ದೇಶದಿಂದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಂಘವು ವೇದಿಕೆ ಒದಗಿಸಲಾಗಿದೆ ಎಂದರು. ಜೀವನದಲ್ಲಿ ಸಾಕಷ್ಟ ಅವಕಾಶಗಳು ನಮಗೆ ಒದಗಿಬರುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಬೇಕು ಎಂದು ಹೇಳಿದ ಅವರು ಸಂಘದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಸನ್ಮಾನ;
ಆನಡ್ಕ ಸರಕಾರಿ ಹಿ.ಪ್ರಾ ಶಾಲಾ ಮುಖ್ಯಗುರು ಶುಭಲತಾ ಹಾರಾಡಿ, ಸರಕಾರಿ ಹಿ.ಪ್ರಾ ಶಾಲಾ ಪ್ರಭಾರ ಮುಖ್ಯಗುರು ಹರಿಣಾಕ್ಷಿ ಸೂತ್ರಬೆಟ್ಟು, ಆನಡ್ಕ ಸರಕಾರಿ ಹಿ.ಪ್ರಾ ಶಾಲಾ ಸಹಶಿಕ್ಷಕಿ ಮಾಲತಿ ಚರಣ್ ರವರ ಅನುಪಸ್ಥಿತಿಯಲ್ಲಿ ಅವರ ಪತಿ ಚರಣ್ ರವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಕಥೆ,‌ಕವನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಧಕ‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸತ್ಯನಾರಾಯಣ ಪೂಜೆ;
ಬೆಳಿಗ್ಗೆ ಕುಲಾಲ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಗಣಪತಿ ಹೋಮ, ಶ್ರೀಸತ್ಯನಾರಾಯಣ ಪೂಜೆ, ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು

ಧನ್ಯಾ ಹಾಗೂ ಸೃಜನ್ ಪ್ರಾರ್ಥಿಸಿದರು. ಸಂಘದ ಜತೆ ಕಾರ್ಯದರ್ಶಿ ಕೃಷ್ಣಪ್ಪ ಮಚ್ಚಿಮಲೆ ಸ್ವಾಗತಿಸಿದರು. ಯಶವಂತ ಪಿ.ವಿ., ಧರ್ಣಪ್ಪ ಮೂಲ್ಯ ಕಜೆ, ಸಚ್ಚಿದಾನಂದ ಡಿ., ಸೀತಾರಾಮ ಕುಲಾಲ್, ಸತೀಶ್ ಉಡ್ಡಂಗಲ ಅತಿಥಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿದರು. ರೇಷ್ಮಾ ಸುಂದರ, ದಿನೇಶ್ ಮುದಲಾಜೆ, ಜ್ಯೋತಿ, ಸಂಘಟನಾ ಕಾರ್ಯದರ್ಶಿ ಜಯಾನಂದ ಸಿ.ಎಚ್., ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ ಕುಲಾಲ್‌ ನಡುವಾಳ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ,
ಕ್ರೀಡಾ ಕಾರ್ಯದರ್ಶಿ ಆನಂದ ಪಡೀಲು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಭೋಜನ ನಡೆದ ನಂತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

LEAVE A REPLY

Please enter your comment!
Please enter your name here