ಭವ್ಯಶ್ರೀ ಕುಲ್ಕುಂದರಿಗೆ ಯಕ್ಷಗಾನ ಪುರಸ್ಕಾರ

0

 

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ‘ಆವರ್ತ’ ಯಕ್ಷಗಾನ ಸಂಘದ ಆಶ್ರಯದಲ್ಲಿ ನೀಡುವ ‘ಡಾ. ಎಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ’ಕ್ಕೆ ತೆಂಕುತಿಟ್ಟಿನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಆಯ್ಕೆಯಾಗಿದ್ದಾರೆ.

ನ.1ರಂದು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯುವ 47 ನೇ ವರ್ಷದ ರಾಜ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.

ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಅಭಿನಂದನಾ ಭಾಷಣ ಮಾಡುವರು. ಈ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ ಇಂದ್ರಕೀಲಕ ಹಾಗೂ ಊರ್ವಶಿ ಶಾಪ ತಾಳಮದ್ದಳೆ ನಡೆಯಲಿದೆ.
ಯಕ್ಷಗಾನ ಗುರು, ಭಾಗವತರಾದ ವಿಶ್ವವಿನೋದ ಬನಾರಿ ಹಾಗೂ ಪ್ರಸಂಗಕರ್ತ, ಛಾಂದಸ ಗಣೇಶ ಕೊಲೆಕಾಡಿ ಅವರ ಶಿಷ್ಯೆಯಾದ ಭವ್ಯಶ್ರೀ ಅವರು ಯುವ ಭಾಗವತರಾಗಿದ್ದಾರೆ. ಸೂಡ ಹಾಗೂ ಮಂಗಳಾದೇವಿ ಮೇಳದಲ್ಲಿ ತಲಾ ಒಂದು ವರ್ಷ ಭಾಗವತಿಕೆ ನಡೆಸಿದ ಅನುಭವ ಹೊಂದಿದ್ದಾರೆ. ಅರೆಭಾಷೆಯಲ್ಲಿ ಆರು, ಕನ್ನಡದಲ್ಲಿ ಕಾಟಾಜೆ ಕ್ಷೇತ್ರ ಮಹಾತ್ಮೆ ಎಂಬ ಒಂದು ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರ ಸಹಿತ ವಿವಿಧ ಯಕ್ಷಗಾನ ಕಮ್ಮಟದಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here