ಸುಳ್ಯದಲ್ಲಿ ಶೃಂಗೇರಿಮಹಾಸಂಸ್ಥಾನದ ಗುರುದೇವತಾ ಭಜನಾ ಮಂಜರಿ- ಭಜನಾ ತರಬೇತಿ ಶಿಬಿರ

0

 

ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನದ ಆಶ್ರಯದಲ್ಲಿ ಸುಳ್ಯ ಸುಬ್ರಹ್ಮಣ್ಯ ಭಜನಾ ಮಂಡಳಿಯ ಆಯೋಜನೆಯಲ್ಲಿ ಅ.30 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಶ್ರೀ ಗುರುದೇವತಾ ಭಜನಾ ಮಂಜರಿ ಒಂದು ದಿನದ ಭಜನಾ ಕಮ್ಮಟವು ನಡೆಯಿತು. ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದಡಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಶೃಂಗೇರಿಯ ಭಜನಾ ಪದ್ಧತಿಯನ್ನು ಕಲಿಯುವ ಹಾಗೂ ಕಲಿಸುವ ಬೃಹತ್ ಅಭಿಯಾನವು ಪರಮಪೂಜ್ಯ ಸ್ವಾಮೀಜಿಯವರು ಆಶೀರ್ವಾದದೊಂದಿಗೆ ಜರುಗಿತು.

ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಅಧ್ಯಕ್ಷ ತೆ ವಹಿಸಿದ್ದರು.
ಶೃಂಗೇರಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಮುಖ್ಯಸ್ಥರಾದ ಉಮೇಶ್ ಹರಿಹರ ರವರು ದೀಪ ಪ್ರಜ್ವಲಿಸಿದರು. ಅತಿಥಿಗಳಾಗಿ ಶೃಂಗೇರಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಸಂಚಾಲಕ ಶ್ರೀಧರ ಶಾಸ್ತ್ರಿ‌ ತರಬೇತಿ ಶಿಬಿರದ ಬಗ್ಗೆ ವಿವರ ನೀಡಿದರು. ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ‌ ಉಪಸ್ಥಿತರಿದ್ದರು. ಶ್ರೀಮತಿ ಲೀಲಾ ಪ್ರಾರ್ಥಿಸಿದರು.


ಸಂಚಾಲಕಿ ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಮಿತಿ ಖಜಾಂಜಿ ಅಶೋಕ‌ ಪ್ರಭು ಸುಳ್ಯ ವಂದಿಸಿದರು. ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶೃಂಗೇರಿ ಮಹಾ ಸಂಸ್ಥಾನದಿಂದ ನಿಯೋಜಿಸಲ್ಪಟ್ಟ ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಯವರು ಬೆಳಗ್ಗಿನಿಂದ ಸಂಜೆಯ ತನಕ ಭಜನಾ ತರಬೇತಿ ನೀಡಿದರು. ಪಕ್ಕ ವಾದ್ಯದಲ್ಲಿ ವಿಜಯ ಮೇನಾಲ ಮತ್ತು ಸಚಿನ್ ನಿಂತಿಕಲ್ಲು ರವರು ಸಹಕರಿಸಿದರು.
ಸುಳ್ಯ ಸುಬ್ರಹ್ಮಣ್ಯ ಭಜನಾ ಮಂಡಳಿ ವತಿಯಿಂದ ರಾಮಕೃಷ್ಣ ಕಾಟುಕುಕ್ಕೆ ,ಉಮೇಶ್ ಹರಿಹರ ರವರನ್ನು ಸನ್ಮಾನಿಸಲಾಯಿತು.


ಸಮಿತಿಯ ಕಾರ್ಯದರ್ಶಿ ಕೃಷ್ಣ ರಾವ್ ಇಂಜಿನಿಯರ್, ನಿರ್ದೇಶಕರಾದ ಭಾಸ್ಕರ ರಾವ್ ಬಯಂಬು, ಕುಮಾರಸ್ವಾಮಿ ರೆಂಜಾಳ, ಅರುಣ್ ಕುಮಾರ್ ನೆಲ್ಲಿಕುಂಜೆ, ಸತೀಶ್ ರಾವ್ ದಾಸರಬೈಲು, ಶ್ರೀಮತಿಉಮಾಜೋಶಿ,ಶ್ರೀಮತಿ ಸುಜಾತ ಎನ್, ಲಕ್ಷ್ಮೀ ನಾರಾಯಣ ರಾವ್ ರೆಂಜಾಳ, ವಿದ್ಯಾ ಬೇರಿಕೆ ಸಹಕರಿಸಿದರು.
ತಾಲೂಕಿನ ವಿವಿಧ ಕಡೆಯಿಂದ ಭಜಕರು ತಮ್ಮ ಭಜನಾ ಮಂಡಳಿಯೊಂದಿಗೆ ಆಗಮಿಸಿ ಶಿಬಿರದಲ್ಲಿ ಭಾಗವಹಿಸಿದರು.ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here