ಸುಬ್ರಹ್ಮಣ್ಯ ಎಸ್. ಎಸ್ .ಪಿ .ಯು. ಕಾಲೇಜಿನ ಕನ್ನಡ ಉಪನ್ಯಾಸಕ ಕುಸುಮಾಧರ ಕಮಿಲ ನಿವೃತ್ತಿ

0

 

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಕನ್ನಡ ಉಪನ್ಯಾಸಕ ಕುಸುಮಾಧರ ಕಮಿಲರವರು ಅ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1991 ರಲ್ಲಿ ಜೆ.ಒ.ಸಿ.ಗೆ ಕನ್ನಡ ಉಪನ್ಯಾಸರಾಗಿದ್ದ ಇವರು 2011 ರ ಬಳಿಕ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿದ್ದಾರೆ.
ಕಾಲೇಜಿನ ಸಾಂಸ್ಕ್ರತಿಕ ಚಟುವಟಿಕೆ, ನಾಟಕಗಳನ್ನು ನಿರ್ದೇಶಸಿರುವ ಇವರು ಕಾಲೇಜಿನ ಮಕ್ಕಳ ಲೆಖನ, ಕವನ ಗಳಿರುವ ವಾರ್ಷಿಕ ಪತ್ರಿಕೆ “ಕುಮಾರವಾಣಿ” ಬಳಿಕದ ದಿನಗಳಲ್ಲಿ “ನುಡಿಹರೆಯ” ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದರು.
ಇವರ ಪತ್ನಿ ಉಷಾ ಎಂ. ಪಿ, ಎನ್. ಎಂ.ಸಿ ಪದವಿ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿಯಾಗಿದ್ದಾರೆ. ಪುತ್ರ ವಿವೇಕ್ ಜರ್ಮನಿಯಲ್ಲಿ ಎಂ ಎಸ್ ಪದವಿ ಪಡೆದು ಜರ್ಮನಿಯ ಮ್ಯೂನಿಚ್ ನಲ್ಲಿ ಇನ್ಫೀನಿಯನ್ ಟೆಕ್ನಾಲಜಿಸ್ ಕಂಪನಿಯಲ್ಲಿ ಡಿಸೈನ್‌ ಇಂಜಿನಿಯರ್ ಉದ್ಯೋಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here