ಮಹಿಳಾ ಬಂಟರ ಸಂಘದ ಮಹಿಳಾ ದಿನಾಚರಣೆಯಲ್ಲಿ ಲಂಚ, ಭ್ರಷ್ಠಾಚಾರದ ವಿರುದ್ಧದ ಸುದ್ದಿ ಜನಾಂದೋಲನದ ಫಲಕ ಸ್ವೀಕಾರ, ಘೋಷಣೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಮಾ.20ರಂದು ಜರಗಿದ ಮಹಿಳಾ ದಿನಾಚರಣಾ ಸಮಾರಂಭದಲ್ಲಿ ಲಂಚ, ಭ್ರಷ್ಠಾಚಾರದ ವಿರುದ್ಧದ ಸುದ್ದಿ ಜನಾಂದೋಲನ ಬೆಂಬಲಿಸಿ ಫಲಕ ಸ್ವೀಕರಿಸಿ, ಲಂಚ, ಭಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಫಲಕ ಸ್ವೀಕಾರ ಹಾಗೂ ಘೋಷಣೆ ಕೂಗಿದರು.

ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿಕಟ ಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತಾಲೂಕಿನ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಕೋಶಾಧಿಕಾರಿ ವಾಣಿ ಶೆಟ್ಟಿ, ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷೆ ಕುಮುದಾ ಎಲ್.ಎನ್. ಶೆಟ್ಟಿ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಸುದ್ದಿ ಬಳಗದ ಮೋಹನ್ ಶೆಟ್ಟಿ ಹಾಗೂ ವಸಂತ ಸಾಮೆತ್ತಡ್ಕ ಸಹಕರಿಸಿದರು.

LEAVE A REPLY

Please enter your comment!
Please enter your name here