ಕೆವಿಜಿ ಡೆಂಟಲ್ ಕಾಲೇಜು ಸಿಟಿಬಿಟಿ ಎಕ್ಸ್ ರೇ ಯುನಿಟ್, ರಿಸರ್ಚ್ ಸೆಂಟರ್, ಫಾರ್ಮಸಿ ಸೆಂಟರ್ ಮತ್ತು ಆಟೋಮೇಷನ್ ಸಾಫ್ಟ್ ವೇರ್ ಸಿಸ್ಟಮ್ ಉದ್ಘಾಟನೆ

0

 

ಕೆವಿಜಿ ಡೆಂಟಲ್ ಕಾಲೇಜು ಸಿಟಿಬಿಟಿ ಎಕ್ಸ್ ರೇ ಯುನಿಟ್, ರಿಸರ್ಚ್ ಸೆಂಟರ್, ಫಾರ್ಮಸಿ ಸೆಂಟರ್ ಮತ್ತು ಆಟೋಮೇಷನ್ ಸಾಫ್ಟ್ ವೇರ್ ಸಿಸ್ಟಮ್ ಉದ್ಘಾಟನೆ ಇಂದು ಸುಳ್ಯದ ಕೆವಿಜಿ ಸಮುದಾಯ ಭವನ ಅಮರಶ್ರೀಭಾಗ್‌ನಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶ್‌ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರೂ, ಗೋವಾದ ಸರಕಾರಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಐಡಾ ಡೆ ನೋರೊನಾ ಡೆ ಅಟಾಡೆ ಮುಖ್ಯ ಅತಿಥಿಗಳಾಗಿದ್ದರು.

 

ಮಂಗಳೂರು ಎಬಿ ಶೆಟ್ಟಿ ಇನ್ಸ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಉಪಪ್ರಾಂಶುಪಾಲರಾದ ಡಾ. ಮಿತ್ರ ಎನ್. ಹೆಗ್ಡೆ ಗೌರವ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಎಒಎಲ್‌ಇ ನಿರ್ದೇಶಕಿ ಡಾ. ಜ್ಯೋತಿ ಆರ್. ಪ್ರಸಾದ್, ಕೆವಿಜಿ ಡೆಂಟಲ್ ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ., ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here