ಚಿತ್ರಕಲಾವಿದ ಶಶಿ ಅಡ್ಕಾರು ಅವರಿಂದ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ

0

 

ಅಶ್ವಥ ಎಲೆಯಲ್ಲಿ ಕರ್ನಾಟಕದ ಕಲಾಕೃತಿ ರಚನೆ

ಜಾಲ್ಸೂರು ಗ್ರಾಮದ ಅಡ್ಕಾರಿನ ಚಿತ್ರಕಲಾವಿದ ಶಶಿ ಅಡ್ಕಾರು ಅವರು ಅಶ್ವಥ ಎಲೆಯಲ್ಲಿ ಕರ್ನಾಟಕ ರಾಜ್ಯದ ಕಲಾಕೃತಿ ರಚಿಸುವ ಮೂಲಕ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.


ಅಶ್ವಥ ಮರದ ಎಲೆಯಲ್ಲಿ ಕರ್ನಾಟಕದ ಚಿತ್ರ ಬಿಡಿಸಿ, ಅದಕ್ಕೆ ಕನ್ನಡ ಧ್ವಜದ ಕೆಂಪು ಮತ್ತು ಹಳದಿ ಬಣ್ಣ ಹಚ್ಚಿ ತಮ್ಮ ಮನೆಯಂಗಳದಲ್ಲಿ ನಿಂತು ಗಗನದೆತ್ತರಕ್ಕೆ ಹಿಡಿದು ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಈ ಚಿತ್ರವು ಇಂದು ಹಲವರ ವಾಟ್ಸಪ್ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿದೆ.

 

LEAVE A REPLY

Please enter your comment!
Please enter your name here