ಸುಬ್ರಹ್ಮಣ್ಯದಲ್ಲಿ ಬಿಜೆಪಿ ವಿಜಯೋತ್ಸವ

0

 

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ 3ನೇಯ ನೂಚಿಲ ವಾರ್ಡ್ ನಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಬೆಂಬಲಿತ ಅಭ್ಯರ್ಥಿ ರಾಜೇಶ್ ಎನ್ ಎಸ್ ವಿಜಯ ದಾಖಲಿಸಿದ ಹಿನ್ನೆಯಲ್ಲಿ ಸುಬ್ರಹ್ಮಣ್ದದಲ್ಲಿ ಬಿಜೆಪಿ ಕಾರ್ಯಕರ್ತರು ಅ.31 ರಂದು ವಿಜಯೋತ್ಸವ ಆಚರಿಸಿದರು.


ವಿಜೇತ ಅಭ್ಯರ್ಥಿ ರಾಜೇಶ್ ಎನ್.ಎಸ್ ಅವರಿಗೆ ವಿಜಯ ಮಾಲೆಯನ್ನು ಹಾಕಿ, ತೆರೆದ ವಾಹನದಲ್ಲಿ ಮೆರವಣೆ ಮಾಡಲಾಯಿತು. ಪಂಚಾಯತ್ ಆವರಣದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದ ತನಕ ಮೆರವಣಿಗೆ ಸಾಗಿ ಕಾಶಿಕಟ್ಟೆಯಲ್ಲಿ ಸಂಪನ್ನವಾಯಿತು. ಕೇರಳದ ಚೆಂಡೆ ವಾದನ ಮೆರವಣೆಗೆಯ ಮೆರುಗನ್ನು ಹೆಚ್ಚಿಸಿತು.ಕಾರ್ಯಕರ್ತರು ಭಗವಾಧ್ವಜ ಮತ್ತು ಬಿಜೆಪಿ ಧ್ವಜಗಳನ್ನು ಹಿಡಿದುಚಜಯಘೋಷ ಕೂಗುತ್ತಾ ಸಂಭ್ರಮಾಚರಿಸಿದರು. ಸಿಹಿ ತಿಂಡಿ ಹಂಚಲಾಯಿತು. ಕಾರ್ಯಕರ್ತರು ಸುಡುಮದ್ದು ಸಿಡಿಸಿ ಸಡಗರಪಟ್ಟರು.

ಈ ಸಂದರ್ಭ ಪ್ರಮುಖರಾದ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಶೇಖರ್ ಸುಬ್ರಹ್ಮಣ್ಯ, ಯಶೋಧಕೃಷ್ಣ ನೂಚಿಲ, ಅಶೋಕ್ ಆಚಾರ್ಯ, ಗಿರೀಶ್ ಆಚಾರ್ಯ ಪೈಲಾಜೆ, ಅಚ್ಚುತ್ತ ಗೌಡ, ದೀಪಕ್ ನಂಬಿಯಾರ್, ಜಯರಾಮ ಎಚ್‌ಎಲ್, ದೀಪಕ್ ಎಚ್.ಬಿ, ಲೋಕೇಶ್ ಎನ್ ಎಸ್, ಭಾರತಿ ದಿನೇಶ್, ವೆಂಕಟೇಶ್ ಎಚ್ ಎಲ್, ಶಿವರಾಮ ಎಚ್ ಎಸ್, ರಾಧಾಕೃಷ್ಣ ಅಗರಿಕಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here