ಉಪ್ಪಿನಂಗಡಿ: ಪದ್ಮವಿದ್ಯಾ ಸರ್ವೀಸ್ ಸ್ಟೇಷನ್ 20ನೇ ವರ್ಷಕ್ಕೆ ಪಾದಾರ್ಪಣೆ ಸಮಾರಂಭ

0

ಉಪ್ಪಿನಂಗಡಿ: ಇಲ್ಲಿನ ಬೊಳ್ಳಾರ್‌ನಲ್ಲಿ ಕಾರ್‍ಯಾಚರಿಸುತ್ತಿರುವ ಪದ್ಮವಿದ್ಯಾ ಸರ್ವೀಸ್ ಸ್ಟೇಷನ್ ಇದರ 20ನೇ ವರ್ಷದ ಪಾದಾರ್ಪಣೆ ಸಮಾರಂಭ ಮಾ.21ರಂದು ಧಾರ್ಮಿಕ ವಿಧಿ ವಿಧಾನ ಕಾರ್‍ಯಕ್ರಮದೊಂದಿಗೆ ಜರಗಿತು.

 

ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಮೆನೇಜರ್ ದೀಪಾ ಆರ್. ಉದ್ಯಮಿಗಳಾದ ಧನ್ಯಕುಮಾರ್ ರೈ, ಆದಿತ್ಯ ಸಂಸ್ಥೆಯ ವಿಕ್ರಂ, ಮನೋಹರ್, ಅನಂತರಾಮ ಕಿಣಿ, ವಸಂತ ಮಜಲು, ಬನಾರಿ ರಾಮಪ್ರಸಾದ್, ಬೋರ್‌ವೆಲ್ ಸಂಸ್ಥೆಗಳ ದೇವಿಪ್ರಸಾದ್, ಸಂಗೋಟಿಯನ್, ಬಾಲು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಂಸ್ಥೆಯ ವಜ್ರಕುಮಾರ್ ಜೈನ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ, ಸಂಸ್ಥೆಯ ವತಿಯಿಂದ ಶೀಘ್ರದಲೇ ಸಿಎನ್‌ಜಿ ಗ್ಯಾಸ್ ಸ್ಟೇಷನ್ ಶುಭಾರಂಗೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾಧರ ಜೈನ್ ವಂದಿಸಿದರು. ಜಯಂತ ಪೊರೋಳಿ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here