ಸುಬ್ರಹ್ಮಣ್ಯ: ಜಿಲ್ಲಾ ಮಟ್ಟದ ಟೆನ್ನಿ ಕಾಯಿಟ್ ಪಂದ್ಯಾವಳಿ

0

 

ಕ್ರೀಡಾ ಕ್ಷೇತ್ರವು ಬದುಕಿಗೆ ಮಾಸಿಕ ಮತ್ತು ದೈಹಿಕ ಆರೋಗ್ಯ ನೀಡುವ ಮಾದ್ಯಮ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಯುವ ಜನಾಂಗದ ಭವಿಷ್ಯವನ್ನು ಉಜ್ವಲಗೊಳಿಸಬಹುದು.ಛಲ ಮತ್ತು ಶ್ರಮದ ಮೂಲಕ ಸಾಧನೆ ಮೆರೆಯುವ ಶ್ರೇಷ್ಠ ವಾದ ಕ್ರೀಡೆಗಳು ಆಧುನಿಕ ಯುಗದಲ್ಲಿ ಜಗದಗಲದಲ್ಲಿ ಅತ್ಯವಶ್ಯಕವಾಗಿ ಮಿನುಗುತ್ತಿದೆ.ಆದುದರಿಂದ ಎಳವೆಯಲ್ಲೇ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುವ ಮೂಲಕ ಮಕ್ಕಳನ್ನು ಕ್ರೀಡಾ ಕ್ಷೇತ್ರದತ್ತ ಆಕರ್ಷಿತರನ್ನಾಗಿಸಬೇಕು.ಆ ಕ್ಷೇತ್ರದಲ್ಲಿ ಸಾಧನೆ ಮೆರೆಯಲು ಪ್ರೋತ್ಸಾಹಿಸಬೇಕು ಎಂದು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ಹೇಳಿದರು. ಅವರು ಎಸ್ ಎಸ್ ಎಸ್ ಪಿಯು ಕಾಲೇಜಿನಲ್ಲಿ ನಡೆದ
ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಬಾಲಕ- ಬಾಲಕಿಯರ ಟೆನ್ನಿ ಕಾಯಿಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅ.29 ರಂದು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಗತ್ಯ. ದೈಹಿಕ ಕ್ಷಮತೆ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಕ್ರೀಡೆ ಪ್ರಧಾನ. ಗ್ರಾಮೀಣ ಭಾಗದ ಕ್ರೀಡೆಗಳು ಇದೀಗ ಪ್ರಾಪಂಚಿಕವಾಗಿ ಅಭ್ಯುದಯ ಹೊಂದಿದೆ. ಕಬಡ್ಡಿ ನಮ್ಮ ಮಣ್ಣಿನ ಕ್ರೀಡೆ ಇದು ಇದೀಗ ಜಗದಗಲದಲ್ಲಿ ಬೆಳಗುತ್ತಿರುವುದು ಹೆಮ್ಮೆಯೆ ಸರಿ.ಕ್ರೀಡೆಯು ಸೌಹಾರ್ದ, ಭಾಂದವ್ಯ ವೃದ್ದಿಗೆ ಬೆಸುಗೆಯಾಗುತ್ತದೆ.
ಯುವ ಜನಾಂಗ ಪಠ್ಯ ಚಟುವಟಿಕೆಯಂತೆ ಕ್ರೀಡಾ ಕ್ಷೇತ್ರದತ್ತ ಕೂಡಾ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಎಸ್ ಎಸ್ ಪಿ ಯು ಕಾಲೇಜಿನ ಉಪನ್ಯಾಸಕ ಕುಸುಮಾಧರ ಕಮಿಲ ಪಂದ್ಯಾಟವನ್ನು ಉದ್ಘಾಟಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ.ವಿ.ಭಟ್, ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಉಪನ್ಯಾಸಕಿಯರಾದ ಜಯಶ್ರೀ.ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಂಜನಾ, ಕ್ರೀಡಾ ಕಾರ್ಯದರ್ಶಿ ಯಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ :
ಬಾಲಕರ ವಿಭಾಗ ಪ್ರಥಮ ಎಸ್ ಎನ್ ಎಸ್ ಸುಂಕದಕಟ್ಟೆ ಪಡೆದರೆ, ದ್ವಿತೀಯ ಸ್ಥಾನವನ್ನು ಗಣಪತಿ ಪದವಿಪೂರ್ವ ಕಾಲೇಜು ಮಂಗಳೂರು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಎಸ್ ಎನ್ ಎಸ್ ಸುಂಕದಕಟ್ಟೆ ಪಡೆದು ಎಸ್ ಎಸ್ ಪಿ ಯು ಸುಬ್ರಹ್ಮಣ್ಯ ದ್ವಿತೀಯ ಸ್ಥಾನ ಪಡೆಯಿತು.

 

LEAVE A REPLY

Please enter your comment!
Please enter your name here