ಕಡಬ:ಐತ್ತೂರು ಬಳಿ ಒಂದೂವರೇ ವರ್ಷದಿಂದ ಕೆಟ್ಟು ನಿಂತ ಬೃಹತ್ ಕ್ರೇನ್: ತೆರವುಗೊಳಿಸುವಂತೆ ನಾಗರಿಕರಿಂದ ತಹಶೀಲ್ದಾರ್ ಗೆ ಮನವಿ

0

ಕಡಬ:ಕೆಟ್ಟು ನಿಂತಿರುವ ಕ್ರೇನ್ನ್ನು ಕೂಡಲೇ ರಸ್ತೆ ಬದಿಯಿಂದ ತೆರವುಗೊಳಿಸುವಂತೆ ನಾಗರಿಕರ ಪರವಾಗಿ ಮಾಜಿ ಗ್ರಾ.ಪಂ ಅಧ್ಯಕ್ಷ ಸತೀಶ್ ನೇತೃತ್ವದ ತಂಡ ಲೋಕೋಪಯೋಗಿ ಇಲಾಖೆಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ.

 


ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿ ಸುಮಾರು ಒಂದೂವರೇ ವರ್ಷದಿಂದ ಒಂದು ಬೃಹತ್ ಕ್ರೇನ್ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಬದಿಯಲ್ಲಿ ಹಾಗೂ ತಿರುವಿನಂಚಿನಲ್ಲಿ ಕೆಟ್ಟು ನಿಂತಿದ್ದು ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಎಷ್ಟೋ ಬಾರಿ ಕೂದಲೆಲೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿ ಹೋಗಿರುತ್ತದೆ. ಅಲ್ಲದೆ ಕೆಲವು ಬೈಕ್ ಸವಾರರು ಬಿದ್ದು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಈ ಬಗ್ಗೆ ಹಲವು ಬಾರಿ ಸ್ಥಳೀಯರು ಮೌಖಿಕವಾಗಿ ದೂರು ನೀಡಿದ್ದು ಹಾಗೂ ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಪ್ರಕಟಗೊಂಡಿದ್ದು ಯಾವುದೇ ಪರಿಹಾರವಾಗಿರುವುದಿಲ್ಲ. ಆದುದರಿಂದ ತಾವುಗಳು ಕೂಡಲೇ ರಸ್ತೆ ಸುರಕ್ಷತಾ ಕಾನೂನಿನಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಕ್ರೇನ್ನ್ನು ತೆರವುಗೊಳಿಸಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಪ್ರಯಾಣಿಕರ ವಾಹನಗಳಿಗೆ ಸುರಕ್ಷಿತವಾಗಿ ಸಂಚಾರ ಮಾಡಲು ಅನುವು ಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅನಂತ ಶಂಕರ್ ಅವರು ಒಂದು ವಾರದೊಳಗೆ ತೆರವು ಮಾಡುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here