2018ರ ಸಾಲ ಮನ್ನ ಬಾಕಿ ಇರುವ ಕೃಷಿಕರಿಗೆ ಹಣ ಬಿಡುಗಡೆ ಮಾಡುವಂತೆ ಸಹಕಾರ ಸಚಿವರಿಗೆ ಮನವಿ

0

ಅರಿಯಡ್ಕ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು 2018ರಲ್ಲಿ ಮಾಡಿದ ರೈತರ ಸಾಲ ಮನ್ನದಲ್ಲಿ ಹಣ ಬಿಡುಗಡೆ ಆಗದೆ ಮನ್ನಾ ಬಾಕಿ ಇರುವ ಕೃಷಿಕರಿಗೆ ಹಣ ಬಿಡುಗಡೆ ಮಾಡುವಂತೆ ಶಾಸಕ ಸಂಜೀವ ಮಠಂದೂರುರವರು ಸಹಕಾರಿ ಸಚಿವ ಸೋಮಶೇಖರ್‌ರವರಿಗೆ ಮನವಿ ಮಾಡಿದರು. ಅಲ್ಲದೆ ನರಿಮೊಗರು ಹಾಗೂ ಕುಂಬ್ರ ಪ್ರಾಥಮಿಕ ಕೃಷಿ ಸಹಕಾರಿ ಸಂಘದಿಂದ ಕೂಡ ಮನವಿ ಸಲ್ಲಿಸಲಾಯಿತು.

 


ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಹಾಗೂ ಕುಂಬ್ರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹರೀಶ್ ಬಿಜತ್ರೆ, ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಧುಕರ ಆಚಾರ್ ಹಿಂದಾರು, ಸಂಘದ ಸದಸ್ಯರಾದ ನಾರಾಯಣ ಗೌಡ, ಎಸ್.ಪಿ.ಸುರೇಶ್ ಪ್ರಭು ಶೆಟ್ಟಿಮಜಲು, ಬಾಲಕೃಷ್ಣ ಪ್ರಭು ಕಲ್ಕಾರು, ಪ್ರವೀಣ್ ನಾಯಕ್ ಸೇರಾಜೆ, ದೇವರಾಜ್ ಕಲ್ಕಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here