ಸಾಮಾಜಿಕ ಜಾಲತಾಣಗಳಲ್ಲಿ ಉಪ್ಪಿನಂಗಡಿಯ ಹಿಂದೂ ವರ್ತಕರ ವ್ಯಾಪಾರ ಮಳಿಗೆಗಳ ಹೆಸರು ಬಳಸಿ ಸುಳ್ಳು ಸುದ್ದಿ ರವಾನೆ

0

  • ನೊಂದ ವರ್ತಕರಿಂದ ಠಾಣೆಗೆ ದೂರು

 

ಪುತ್ತೂರು : ಉಪ್ಪಿನಂಗಡಿಯ ಹಿಂದೂ ವರ್ತಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೊಂದ ವರ್ತಕರ ನಿಯೋಗ ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ಮತ್ತು ಉಪ್ಪಿನಂಗಡಿ ಸಬ್‌ಇನ್‌ಸ್ಪೆಕ್ಟರ್ ಕುಮಾರ್ ಕಾಂಬಳೆರವರನ್ನು ಭೇಟಿಯಾಗಿ ಮನವಿ ನೀಡಿ ಆಗ್ರಹಿಸಿದರು. ಸುಮಾರು 32 ಹಿಂದೂ ಸಮುದಾಯದ ಅಂಗಡಿಗಳ ಹೆಸರನ್ನು ಬಳಸಿ ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ ಎಂದು ಎಂದು ಬರೆದು ಮತೀಯ ಸಂಘರ್ಷವನ್ನು ಉಂಟು ಮಾಡುವ ಷಡ್ಯಂತ್ರವಾಗಿದೆ. ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ.ಕೋಸ್ತಾ, ಉಪಾಧ್ಯಕ್ಷ ಶಬೀರ್ ಕೆಂಪಿ, ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಯೂನಿಕ್, ಸದಸ್ಯರಾದ ಇರ್ಷಾದ್ ಯು.ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಠ, ಗ್ರಾಮ ಪಂಚಾಯತ್ ಸದಸ್ಯರಾದ ತೌಸೀಫ್ ಯು.ಟಿ, ಮಹಮ್ಮದ್ ಕೆಂಪಿ, ಇಬ್ರಾಹಿಂ ಆಚಿ, ಜಲೀಲ್ ಮುಕ್ರಿ, ಇಕ್ಬಾಲ್ ಪಾಂಡೇಲ್, ಯತೀಶ್ ಶೆಟ್ಟಿ ಸುವ್ಯ ಕ್ರೀಮ್ ಪಾರ್ಲರ್, ಸದಾನಂದ ಕಾರ್‌ಕ್ಲಬ್, ಶಿವಪ್ರಸಾದ್ ರಾಮ್ ಮೆಡಿಕಲ್ಸ್, ಸಂದೀಪ್ ಶೆಟ್ಟಿ ಟಿಫಿನ್ ಹಾಲ್, ಪ್ರಕಾಶ್ ಮತ್ತು ಸಹೋದರರು ಅಶ್ವಿನಿ ಟ್ರೇಡರ್ಸ್, ಜಗದೀಶ್ ನಾಯಕ್ ಕರಾಯ, ಚೇತನ್ ನಾಯಕ್ ಕರಾಯ, ನಿತ್ಯಾನಂದ ಕಿಣಿ ಕರಾಯ, ಜಯರಾಮ ಅನ್ನಪೂರ್ಣ, ವೆಂಕಟರಮಣ ನಾಯಕ್ ಮತ್ತು ಬ್ರಿಜೇಶ್ ಬಿ.ಡಾಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here