ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ

0

ಸುಳ್ಯದ ಪಯಸ್ವಿನಿ ಹಿರಿಯ ಜೇಸಿಗಳ ಸಂಘದ ವತಿಯಿಂದ ಸುಳ್ಯದ ಸಾಹಿತಿ , ಜ್ಯೋತಿಷಿ ಮತ್ತು ಚಿತ್ರ ನಿರ್ದೇಶಕರಾದ ಹಿರಿಯ ಜೇಸಿ ಎಚ್ .ಭೀಮರಾವ್ ವಾಷ್ಠರ್ ಅವರಿಗೆ ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ಪಯಸ್ವಿನಿ ಹಿರಿಯ ಜೇಸಿಗಳ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು .

ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಹಿರಿಯ ಜೇಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ಮತ್ತು ಎಂ ಬಿ ಫೌಂಡೇಶನ್ ಅದ್ಯಕ್ಪರಾದ ಜೇಸಿ ಎಂ ಬಿ ಸದಾಶಿವ ರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು . ಈ ಸಂದರ್ಭದಲ್ಲಿ ಜೇಸಿ ಎಸ್ ಆರ್ ಸೂರಯ್ಯ , ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಹಿರಿಯ ಜೇಸಿಗಳಾದ ಜೇಸಿ ಚಂದ್ರಶೇಖರ್ ಪೇರಾಲು , ಜೇಸಿ ಕೆ ಎಮ್ ಮುಸ್ತಫಾ , , ಜೇಸಿ ದಿನೇಶ್ ಮಡಪ್ಪಾಡಿ , ಜೇಸಿ ದಿನೇಶ್ ಅಂಬೆಕಲ್ಲು , ಜೇಸಿ ಕೆ ಟಿ ವಿಶ್ವನಾಥ್ , ಜೇಸಿಐ ಸುಳ್ಯ ಪಯಸ್ವಿನಿ ಘಟಕಸ ಅಧ್ಯಕ್ಷ ಜೇಸಿ ರಂಜಿತ್ ಕುಕ್ಕೆಟ್ಟಿ, ಜೇಸಿ ಲೋಕೇಶ್ ಪೆರ್ಲಂಪಾಡಿ ಇನ್ನಿತರರು ಉಪಸ್ಥಿತರಿದ್ದರು . ನಂತರ ಸಾಹಿತಿ ಮತ್ತು ಗಾಯಕ ಭೀಮರಾವ್ ವಾಷ್ಠರ್ ರವರು ಕನ್ನಡ ರಾಜ್ಯೋತ್ಸವದ ಗೀತೆಗಳನ್ನು ಹಾಡಿದರು .

LEAVE A REPLY

Please enter your comment!
Please enter your name here