ಕನಕಮಜಲು: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸಮಿತಿ ರಚನೆ

0

 

ಸುಳ್ಯದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ.) ಗ್ರಾಮವಾರು ಸಂಚಲನಾ ಸಮಿತಿಯ ರಚನೆಗಳಿಗೆ ಚಾಲನೆ ನೀಡಲಾಗಿದೆ.

ಕನಕಮಜಲು ಗ್ರಾಮ ವ್ಯಾಪ್ತಿಯ ನಿವೇದಿತಾ ಸಂಚಲನಾ ಸಮಿತಿ ರಚನೆಗೊಂಡಿದ್ದು ಏಳು ಜನರನ್ನೊಳಗೊಂಡ ತಂಡದಲ್ಲಿ ಸಂಚಾಲಕ ಮತ್ತು ಸಹ ಸಂಚಾಲಕ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಇಂದಿರಾ ರೈ, ಕಾರ್ಯದರ್ಶಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಖಜಾಂಜಿ ಜಯಂತಿ ಅಜ್ಜಾವರ ಹಾಗೂ ಜೊತೆ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು.
ಸಂಚಾಲಕರಾಗಿ ಪೂರ್ಣಿಮಾ ಮಾಣಿಕೋಡಿ,ಸಹಸಂಚಾಲಕರಾಗಿ ತೃಷಲಾ ಕುದ್ಕುಳಿ ಆಯ್ಕೆಗೊಂಡಿದ್ದಾರೆ.
ಸದಸ್ಯರುಗಳಾಗಿ ಸುಶೀಲಾ ಕಾರಿಂಜ, ಧನ್ಯಪಲ್ಲತ್ತಡ್ಕ, ಹೇಮಲತಾ ಬೊಮ್ಮೆಟ್ಟಿ,ಗೀತಾ ಅಡ್ಕಾರು, ಶಮಿತಾ ಶರತ್ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here