ಸುಳ್ಯ ರಾಮ ಭಜನಾ ಮಂದಿರದಲ್ಲಿ ನಡೆದ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮ ಸಮಾಪನ

0

 

ತಾಲೂಕಿನ ಆಯ್ದ ಭಜನಾ ಮಂಡಳಿಗಳಿಂದ ಭಜನಾ ಸ್ಪರ್ಧೆ

ಸಹಕಾರಿ ರತ್ನ ಸೀತಾರಾಮ ರೈ ಯವರಿಗೆ ಸನ್ಮಾನ

ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ಒಂದು ತಿಂಗಳ ಪರ್ಯಂತ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜಕರಿಂದ ನಡೆದ ಭಜನಾ ಸಂಕೀರ್ತನಾ ಕಾರ್ಯಕ್ರಮವು ನ.3 ರಂದು ಸಮಾಪನಗೊಂಡಿತು.

ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈ ಸವಣೂರು ರವರನ್ನು ಮಂದಿರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ರವರು ಭಜನೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಸುಳ್ಯ ಕೇಶವ ಕೃಪಾ ವೇದ ಪಾಠ ಶಾಲೆಯ ಸಂಚಾಲಕಿ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ರಮೇಶ, ಮಂದಿರದ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯು.ಯಂ.ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಕು.ಮಂಜು ಮಧುವನ ಪ್ರಾರ್ಥಿಸಿದರು. ಧರ್ಮದರ್ಶಿ ಮಂಡಳಿಯ ಸದಸ್ಯ ಅಶೋಕ ಪ್ರಭು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭಾಸ್ಕರ ನಾಯರ್ ಸನ್ಮಾನ ಪತ್ರ ವಾಚಿಸಿದರು. ಗೋಪಾಲ ನಡುಬೈಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಒಂದು ತಿಂಗಳ ಪರ್ಯಂತ ನಡೆದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳ ಪೈಕಿ 12 ತಂಡಗಳನ್ನು ಭಜನಾ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.
ಸ್ಪರ್ಧೆಯು ನ. 3 ರಂದು ಬೆಳಗ್ಗೆ ಆರಂಭಗೊಂಡಿತು. ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರೋಹಿತ್ ನಾಗರಾಜ ಭಟ್ ಹಾಗೂ ಸಮಿತಿ ಪದಾಧಿಕಾರಿಗಳಾದ ಮಹಾಬಲ ಕೇರ್ಪಳ, ಭಾಸ್ಕರ ನಾಯರ್ ಅರಂಬೂರು, ಗೋಪಾಲ ನಡುಬೈಲು, ಗಣೇಶ್ ಆಚಾರ್ಯ ಸುಳ್ಯ, ಶ್ರೀನಿವಾಸ ಸುಳ್ಯ, ಯಂ.ಯಸ್.ಪುರುಷೋತ್ತಮ, ಪ್ರಭಾಕರ ನಾಯರ್, ಆನಂದ ಬೆಟ್ಟಂಪಾಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಭಜನಾ ಸ್ಪರ್ಧೆಯಲ್ಲಿ ಸುಮಾರು 11 ತಂಡಗಳು ಸ್ಪರ್ಧಿಸಿದ್ದು ಪ್ರಥಮ ಬಹುಮಾನ ವಿಶ್ವ ಕರ್ಮ ಭಜನಾ ಮಂಡಳಿ ಮುರೂರು,ದ್ವಿತೀಯ ಮಹಿಳಾ ಪರಿಷತ್ ಸುಳ್ಯ, ತೃತೀಯ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು, ಚತುರ್ಥ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ, ಲಕ್ಷ್ಮೀಶ ಮತ್ತು ಬಳಗ ಸುಳ್ಯ ತಂಡಗಳು ಬಹುಮಾನ ಪಡೆದುಕೊಂಡರು. ನಿರ್ಣಾಯಕರಾಗಿ ಅರವಿಂದ ಆಚಾರ್ಯ ಮಾಣಿಲ ಮತ್ತು ದಿನೇಶ್ ಮಾಮೇಶ್ವರ ಬಂಟ್ವಾಳ ಸಹಕರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here