ಹರಿಹರ ಪಲ್ಲತ್ತಡ್ಕದಲ್ಲಿ ತೆರೆದುಕೊಂಡ ಬಾರ್ & ರೆಸ್ಟೋರೆಂಟ್

0

 

ಹೋರಾಟಗಾರರಿಂದ ತೀವ್ರ ವಿರೋದ; ಬೋರ್ಡ್ ಕಿತ್ತೊಗೆದು ಅಂಗಡಿಗೆ ನುಗ್ಗಲು ಮುಂದಾದ ಹೋರಾಟಗಾರರು

ಪರಸ್ಪರ ತಳ್ಳಾಟ; ಲಾಠಿ ಬೀಸಿ‌ ಚದುರಿಸಿದ ಪೊಲೀಸರು

ಹರಿಹರ ಪಲ್ಲತಡ್ಕದಲ್ಲಿ ಇಂದು ದಿಡೀರ್ ಆಗಿ ಬಾರ್ & ರೆಸ್ಟೋರೆಂಟ್ ತೆರೆದುಕೊಂಡಿದ್ದು ಮದ್ಯ ಮಾರಾಟ ಮುಕ್ತ ಗ್ರಾಮ ಹೋರಾಟ ಸಮಿತಿಯವರು ಅಂಗಡಿಯ ಮೆಟ್ಟಲಿನಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದರು.

 

ಸಂಜೆಯ ವೇಳೆಗೆ ಪ್ರತಿಭಟನಾಗಾರರ ಸಂಖ್ಯೆ ಹೆಚ್ಚಾಗಿದ್ದು ತಾಲೂಕಿನ ಕೆಲ ಮುಖಂಡರೂ ಸ್ಥಳಕ್ಕೆ ಬಂದು ಸೇರಿಕೊಂಡರು. ಅಕ್ರಮ ಮದ್ಯದಂಗಡಿ ತೆರವು ಮಾಡಬೇಕೆಂದು ಕೇಳಿದರು. ಅಬಕಾರಿ ಡಿ.ಸಿ ತೆರವುಗೊಳಿಸಲು ಹೇಳಿದರೆ ಮಾತ್ರ ತೆರವು ಮಾಡುವುದಾಗಿ ಬಾರ್ ನವರು ತಿಳಿಸಿದರು. ಆಗ ಅಲ್ಲಿದ್ದ ಕೆಲವರು ಅಂಗಡಿಗೆ ನುಗ್ಗಲು ಯತ್ನಿಸಿದ್ದು ಬೋರ್ಡ್ ಕಿತ್ತೆಸೆದರು. ಈ ಸಂದರ್ಭ ಪರಸ್ಪರ ತಳ್ಳಾಟ ನಡೆದಿದ್ದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಸಂಭಾವ್ಯ ಗಲಾಟೆ ತಪ್ಪಿಸಿದರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here