ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ.ಓಪರೇಟಿವ್ ಸೊಸೈಟಿ ಲಿ. ಪುತ್ತೂರು ಶಾಖೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಕೆ. ಸವಣೂರು ಸೀತಾರಾಮ ರೈ ಅವರಿಗೆ ಸನ್ಮಾನ

0

 

ಪುತ್ತೂರು:ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ.ಓಪರೇಟಿವ್ ಸೊಸೈಟಿ ಲಿ. ಪುತ್ತೂರು ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಜ್ಯ ಸರಕಾರದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ. ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ ಕಾರ್ಯಕ್ರಮ ಮಾ.22ರಂದು ನಡೆಯಿತು.

 

 

ಸನ್ಮಾನ ಸ್ವೀಕರಿಸಿದ ಶ್ರೀ ಕೆ. ಸವಣೂರು ಸೀತಾರಾಮ ರೈಯವರು ಮಾತನಾಡಿ ತನ್ನ 54ವರ್ಷದ ಸಹಕಾರಿ ಕ್ಷೇತ್ರದ ಸೇವೆ ಮತ್ತು ಅನುಭವವನ್ನು ಹಂಚಿಕೊಂಡರು. ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ ಅದನ್ನು ಸದುಪಯೋಗ ಪಡಿಸುವುದು ಬಹಳ ಮುಖ್ಯ. ಸಹಕಾರ ಕ್ಷೇತ್ರವು ನಾನು ಮೆಚ್ಚಿಕೊಂಡಂತಹ ಬಹಳ ಉತ್ತಮವಾದ ಕ್ಷೇತ್ರ ಮತ್ತು ಈ ಕ್ಷೇತ್ರದಲ್ಲಿ ಉತ್ತಮವಾದ ಭವಿಷ್ಯವಿದೆಯೆಂದು ತಿಳಿಸಿದರು. ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ವಿ. ಚಿಕ್ಕಪ್ಪ ನಾಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸೀತಾರಾಮ ರೈಯವರಿಗೆ ಲಭಿಸಿದ ಈ ಪ್ರಶಸ್ತಿಯಿಂದ ನಮಗೆಲ್ಲಾ ತುಂಬಾ ಸಂತೋಷವಾಗಿದೆ, ಮುಂದೆಯೂ ಅವರಿಗೆ ಹೆಚ್ಚಿನ ಪ್ರಶಸ್ತಿಗಳು ಸಿಗಲಿ ಎಂದು ಹಾರೈಸಿದರು. ಶಾಖಾ ಸಲಹಾ ಸಮಿತಿ ಸದಸ್ಯ ವಕೀಲರಾದ ದುರ್ಗಾಪ್ರಸಾದ್ ರೈರವರು ಮಾತನಾಡಿ ಶ್ರೀ ಕೆ. ಸವಣೂರು ಸೀತಾರಾಮ ರೈ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಸಿಕ್ಕಿರುವುದು ಇಡೀ ಪುತ್ತೂರು ತಾಲೂಕಿನಲ್ಲಿ ಎಲ್ಲರೂ ಸಂಭ್ರಮ ಪಡುವಂತಹ ವಿಚಾರವಾಗಿದ್ದು, ಸೀತಾರಾಮ ರೈ ಅವರ ಸರಳತೆ ಮತ್ತು ಸಹಕಾರಿ ಕ್ಷೇತ್ರದ ಅನುಭವ ಯುವ ಜನತೆಗೆ ಆದರ್ಶನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಖಾ ವ್ಯವಸ್ಥಾಪಕರಾದ ಶ್ರೀ ಚಂದ್ರಹಾಸ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಶಾಖಾ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ಸಂಜೀವ ಆಳ್ವ, ಶ್ರೀ ಗಂಗಾಧರ್ ರೈ, ಶ್ರೀ ಉದಯಶಂಕರ್ ಶೆಟ್ಟಿ, ಶ್ರೀ ಸುಂದರ್ ರೈ, ಶ್ರೀ ಜಯರಾಮ್ ರೈ, ಶ್ರೀಮತಿ ರೂಪಾರೇಖಾ ಆಳ್ವ ಮತ್ತು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here